ಬದಿಯಡ್ಕ: ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ನೂತನ ಗಣೇಶ ಗುಡಿಯ ಉದ್ಘಾಟನಾ ಸಮಾರಂಭ ಮತ್ತು 48ನೇವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನೊಳಗೊಂಡು ಆ.31ರಿಂದ ಸೆ.3ರ ತನಕ ಜರಗಲಿದೆ. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೇತೃತ್ವದಲ್ಲಿ ಕಾರ್ಯಕ್ರಮಗಳುನಡೆಯಲಿದೆ.
ಕಾರ್ಯಕ್ರಮ ವಿವರ:
ಆ.31ರಂದು ಸಂಜೆ 7ರಿಂದ ರಾಕ್ಷೋಘ್ನ, ವಾಸ್ತುಬಲಿ, ವೈದಿಕ ಕಾರ್ಯಕ್ರಮಗಳು. ಸೆ.1ರಂದು ಪೂರ್ವಾಹ್ನ 7.27ರಿಂದ 9.27ರ ಒಳಗೆ ನಡೆಯುವ ಕನ್ಯಾಲಗ್ನ ಸುಮುಹೂರ್ತದಲ್ಲಿ ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ ಇವರ ಪೌರೋಹಿತ್ಯದಲ್ಲಿ ನೂತನ ಗಣೇಶ ಗುಡಿಯ ಉದ್ಘಾಟನೆ. 10 ಗಂಟೆಯಿಂದ ಸೂರಂಬೈಲು ಶ್ರೀ ಗಣೇಶ ಭಜನಾ ಮಂಡಳಿಯವರಿಂದ ಭಜನೆ, 11ರಿಂದ ಧಾರ್ಮಿಕ ಸಭೆ. ನಿವೃತ್ತ ಆರ್.ಡಿ.ಒ. ಎಂ.ಶ್ರೀಧರ ಭಟ್ ಅಧ್ಯಕ್ಷತೆಯಲ್ಲಿ ಕವಿ, ಸಾಹಿತಿ ಹಾಗೂ ಆಕಾಶವಾಣಿ ಮಂಗಳೂರು ಇದರ ನಿವೃತ್ತ ನಿಲಯ ನಿರ್ದೇಶಕರಾದ ಡಾ. ವಸಂತ ಕುಮಾರ್ ಪೆರ್ಲ ಅವರಿಂದ ಧಾರ್ಮಿಕ ಉಪನ್ಯಾಸ. ಇದೇ ಸಂದರ್ಭದಲ್ಲಿ ವಾಸ್ತುಶಿಲ್ಪಿ ತಜ್ಞ ಬೆದ್ರಡ್ಕ ರಮೇಶ ಕಾರಂತ, ರಮಣೀ ಕುಬೇರಪ್ಪ ಅಡ್ಯಾರು, ಮಂಗಳೂರು ಮತ್ತು ವಿನೋದ್ ಕುಮಾರ್ ಅರಿಮೂಲೆ, ನೀಲೇಶ್ವರ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಅಪರಾಹ್ನ 2.30ರಿಂದ ಕರಿಂಬಿಲ ಲಕ್ಷ್ಮಣ ಪ್ರಭು ನಿರ್ದೇಶನ ಹಾಗೂ ನಿರೂಪಣೆಯಲ್ಲಿ ಯಕ್ಷಗಾನಾಮೃತ. ಭಾಗವತರಾಗಿ ಬಲಿಪ ಶಿವಶಂಕರ ಭಟ್, ತಲ್ಪಣಾಜೆ ವೆಂಕಟ್ರಮಣ ಭಟ್, ಪುತ್ತೂರು ರಮೇಶ್ ಭಟ್, ಚೆಂಡೆ ಮದ್ದಳೆಯಲ್ಲಿ ಲಕ್ಷ್ಮೀನಾರಾಯಣ ಅಡೂರು, ಉದಯ ಕಂಬಾರು ಪಾಲ್ಗೊಳ್ಳಲಿದ್ದಾರೆ.
ಸೆ.2ರಂದು ಪ್ರಾತಃಕಾಲ 6.30ಕ್ಕೆ ಶ್ರೀ ಮಹಾಗಣಪತಿ ಪ್ರತಿಷ್ಠೆ, ಧ್ವಜಾರೋಹಣ, ರಾಷ್ಟ್ರಗೀತೆ, ಸುಪ್ರಭಾತ, ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ ಹಾಗೂ ವೇದಮೂರ್ತಿ ಪೆರಡಾಲ ವೆಂಕಟೇಶ್ವರ ಭಟ್ ಇವರ ನೇತೃತ್ವದಲ್ಲಿ ಗಣಪತಿ ಹೋಮ, ಶ್ರೀಗಣೇಶ ಭಜನಾ ಸಂಘ ಬದಿಯಡ್ಕ ಹಾಗೂ ಮೂಕಾಂಬಿಕಾ ಭಜನಾ ಸಂಘ ನೆಲ್ಯಡ್ಕ ಇವರಿಂದ ಭಜನೆ, 9ರಿಂದ ವಿವಿಧ ಸ್ಪರ್ಧೆಗಳ ಪ್ರಾರಂಭ, 10.30ರಿಂದ ಡಾ. ಸೂರ್ಯ ಎನ್.ಶಾಸ್ತ್ರಿ ಬದಿಯಡ್ಕ ಇವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ, ಹಿಂದೂ ಐಕ್ಯವೇದಿ ಕೇರಳ ರಾಜ್ಯ ಕಾರ್ಯದರ್ಶಿ ಕೆ.ಪಿ.ಹರಿದಾಸ್ ಇವರಿಂದ ಧಾರ್ಮಿಕ ಉಪನ್ಯಾಸ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ. ಅಪರಾಹ್ನ 2ರಿಂದ ಪಟ್ಟಾಜೆ ಗೋಪಾಲ ಭಟ್ ಮತ್ತು ಬಳಗದವರಿಂದ ಯಕ್ಷಗಾನ ಬಯಲಾಟ `ಮಹಿಷಮರ್ಧಿನಿ', ಸಂಜೆ 5.45ಕ್ಕೆ ದೀಪಾರಾಧನೆ, 6 ಗಂಟೆಯಿಂದ ಬದಿಯಡ್ಕ ಗಣೇಶ ಭಕ್ತವೃಂದ ಮಹಿಳಾ ಘಟಕ ಇವರಿಂದ ತಿರುವಾದಿರ, 6.30ರಿಂದ ಭರತನಾಟ್ಯ ಪ್ರವೀಣೆ ರಾಧಿಕಾ ಶೆಟ್ಟಿ ಮತ್ತು ಬಳಗದವರಿಂದ ನಾಟ್ಯಸಿಂಚನ, ರಾತ್ರಿ 9.00ರಿಂದ ಮಹಾಪೂಜೆ, ಪ್ರಸಾದ ವಿತರಣೆ.
ಸೆ.3ರಂದು ಬೆಳಗ್ಗೆ 7 ಗಂಟೆಗೆ ಉಷಃಪೂಜೆ, ಶ್ರೀಗಣೇಶ ಭಜನಾ ಮಂಡಳಿ ಬದಿಯಡ್ಕ, 8 ರಿಂದ ಶ್ರೀಮಾತಾ ಹವ್ಯಕ ಮಹಿಳಾ ಭಜನಾ ಸಂಘ ಬದಿಯಡ್ಕ, 9 ರಿಂದ ಶ್ರೀರಾಮ ಭಜನಾ ಮಂಡಳಿ ಬದಿಯಡ್ಕ ಇವರಿಂದ ಭಜನೆ, 10ರಿಂದ ಪವನ್ ನಾಯಕ್ ಬದಿಯಡ್ಕ ಮತ್ತು ಬಳಗದವರಿಂದ ದಾಸ ಸಂಕೀರ್ತನೆ, 12 ರಿಂದ ಗಂಗಾಧರ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ, 2.30 ರಿಂದ ಶ್ರೀದೇವರ ಭವ್ಯ ಶೋಭಾಯಾತ್ರೆ ಪ್ರಾರಂಭ, ಧ್ವಜಾವರೋಹಣ, ಪೆರಡಾಲ ಶ್ರೀ ಉದನೇಶ್ವರ ದೇವಾಲಯದ ಎದುರು ಭಾಗದಲ್ಲಿ ಹರಿಯುತ್ತಿರುವವರದಾ ನದಿಯಲ್ಲಿ ವಿಗ್ರಹ ವಿಸರ್ಜನೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.
ಶೋಭಾಯಾತ್ರೆಯಲ್ಲಿ :
ಅಗ್ನಿ ಫ್ರೆಂಡ್ಸ್ ಬದಿಯಡ್ಕ ಇವರಿಂದ ಸಂಚಾರಿ ಭಕ್ತಿಗೀತೆ, ಆರ್.ಸಿ.ಬಿ. ಬದಿಯಡ್ಕ ಸಾದರಪಡಿಸುವ ನೃತ್ಯ, ಧೀರಾಸ್ ಬದಿಯಡ್ಕ ಇವರಿಂದ ಸಂಚಾರಿ ಡ್ಯಾನ್ಸ್, ರುದ್ರಪಾಟಕ್ ಬ್ಯಾಂಡ್ ಸೆಟ್ ಬದಿಯಡ್ಕ ಇವರು ಸಾದರಪಡಿಸುವ ಬಾಂಗ್ಡಾನೃತ್ಯ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳಿವೆ.


