ಬದಿಯಡ್ಕ: ನೀಲೇಶ್ವರದಲ್ಲಿ ಇತ್ತೀಚೆಗೆ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ಅಮೆಚ್ಯೂರ್ ಅಸೋಸಿಯೇಶನ್ ಮೀಟ್ ಅಂಡರ್ 16 ಚಾಂಪ್ಯನ್‍ಶಿಪ್‍ನಲ್ಲಿ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ವಿನೀತ್ ರಾಜ್ 400 ಮೀಟರ್ ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಜೊತೆಗೆ 200 ಮೀಟರ್ ಓಟದಲ್ಲಿ ಮೂರನೇ ಸ್ಥಾನವನ್ನು ಈತ ಗಳಿಸಿದ್ದಾನೆ. ರಾಜ್ಯಮಟ್ಟದ ಸ್ಪರ್ಧೆಯು ಸೆ.15,16,17ರಂದು ಎರ್ನಾಕುಳಂನಲ್ಲಿ ನಡೆಯಲಿದೆ. ಆಟೋಟಗಳಲ್ಲಿ ಅನೇಕ ಪದಕಗಳನ್ನು ಪಡೆದ ಈತ ಭರವಸೆಯ ಕ್ರೀಡಾಪಟುವಾಗಿ ಹೊರಹೊಮ್ಮುತ್ತಿದ್ದಾನೆ. 10ನೇ ತರಗತಿಯಲ್ಲಿ ಕಲಿಯುತ್ತಿರುವ ಈತ ಪೈವಳಿಕೆ ಏದಾರು ನಿವಾಸಿ ರಾಘವ ವೈ. ಹಾಗೂ ಭಾರತಿ ದಂಪತಿಗಳ ಪುತ್ರನಾಗಿದ್ದಾನೆ. ಈತನ ಸಹೋದರ ತಿಲಕ್ ರಾಜ್ ಇದೇ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಯಾಗಿದ್ದು ಉತ್ತಮ ಕ್ರೀಡಾಪಟುವಾಗಿದ್ದು, ಅನೇಕ ಬಹುಮಾನಗಳನ್ನು ಗಳಿಸಿದ್ದಾನೆ. ಶಾಲಾ ಮುಖ್ಯೋಪಾಧ್ಯಾಯಿನಿ ಪಿ.ಕೆ.ತಂಗಮಣಿ, ಆಡಳಿತಮಂಡಳಿ, ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘವು ಅಭಿನಂದನೆಯನ್ನು ಸಲ್ಲಿಸಿದೆ.
ನವಜೀವನ ಶಾಲೆಯ ವಿದ್ಯಾರ್ಥಿ ವಿನೀತ್ ರಾಜ್ 400 ಮೀ. ಓಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
0
ಆಗಸ್ಟ್ 28, 2019