ಕಾಸರಗೋಡು: ಜಿಲ್ಲಾ ಬಂಟರ ಸಂಘದ 2019 ನೇ ವರ್ಷದ ವಿದ್ಯಾರ್ಥಿ ವೇತನಕ್ಕೆ ಮತ್ತು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹಿಂದಿನ ವರ್ಷಗಳಂತೆ ಈ ವರ್ಷವೂ ಸಂಘದ ವತಿಯಿಂದ ಪದವಿಪೂರ್ವ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ನೀಡಲು ತೀರ್ಮಾನಿಸಿದ್ದು ಅರ್ಹ ವಿದ್ಯಾರ್ಥಿಗಳಿಂದ ನಿಗದಿತ ಫಾರಂಗಳಲ್ಲಿ ಅರ್ಜಿಗಳನ್ನು ಬಂಟರ ಸಂಘದ ಸ್ಥಳೀಯ ಪಂಚಾಯತ್ ಘಟಕಗಳ ಕಾರ್ಯದರ್ಶಿಗಳು, ಜಿಲ್ಲಾ ಸಮಿತಿ ಸದಸ್ಯರು ಸ್ವೀಕರಿಸಿ ತಮ್ಮ ಶಿಫಾರಸ್ಸಿನೊಂದಿಗೆ ಆ.20 ಯಾ ಮುಂಚಿತವಾಗಿ ಫಿರ್ಕಾ ಸಂಘಕ್ಕೆ ತಲುಪುವಂತೆ ಕಳುಹಿಸಬೇಕು. ಫಿರ್ಕಾ ಸಂಘಗಳು ತಮ್ಮ ಶಿಫಾರಸ್ಸಿನೊಂದಿಗೆ ಆ.25 ರೊಳಗಾಗಿ ಜಿಲ್ಲಾ ಸಂಘಕ್ಕೆ ತಲುಪಿಸಬೇಕು. ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಬಿ.ಗ್ರೇಡ್ ಅಥವಾ ಅದಕ್ಕಿಂತ ಮೇಲಿನ ಗ್ರೇಡ್ ಪಡೆದವರು ಮಾತ್ರ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ.
ಈ ವರ್ಷ ಪ್ರಥಮ ವರ್ಷದ ಪದವಿಪೂರ್ವ ವಿದ್ಯಾಭ್ಯಾಸ ಮುಗಿಸಿರುವ ವಿದ್ಯಾರ್ಥಿಗಳು ಮೊದಲ ವರ್ಷದ ಪರೀಕ್ಷೆಯಲ್ಲಿ ಶೇ.60 ಅಂಕ ಗಳಿಸಿ ಉತ್ತೀರ್ಣರಾಗಿದ್ದರೆ, ದ್ವಿತೀಯ ವರ್ಷದ ಪದವಿಪೂರ್ವ ವಿದ್ಯಾರ್ಥಿ ವೇತನಕ್ಕೆ ಅವರು ಕೂಡಾ ಅರ್ಹರಾಗಿರುತ್ತಾರೆ. ಅಂತಹ ವಿದ್ಯಾರ್ಥಿಗಳ ಅರ್ಜಿಗಳನ್ನೂ ಕಳುಹಿಸಬಹುದು. ಈ ಎಲ್ಲಾ ವಿದ್ಯಾರ್ಥಿಗಳ, ಹೆತ್ತವರ ಕುಟುಂಬದ ವಾರ್ಷಿಕ ಆದಾಯ ರೂ. ಒಂದು ಲಕ್ಷ ಮೀರಿರಬಾರದು.
ಪ್ರತಿಭಾ ಪುರಸ್ಕಾರ : ಪ್ರತಿ ವರ್ಷದಂತೆ ಈ ವರ್ಷವೂ ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಲಭಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಅಂತಹ ವಿದ್ಯಾರ್ಥಿಗಳ ವಿವರಗಳನ್ನು ಅವರ ಪ್ರಮಾಣೀಕೃತ ಅಂಕ ಪಟಿಯೊಂದಿಗೆ ಸಂಗ್ರಹಿಸಿ ಫಿರ್ಕಾ ಸಂಘಗಳು ಆ.25 ರೊಳಗೆ ಜಿಲ್ಲಾ ಸಂಘಕ್ಕೆ ತಲುಪಿಸಲು ವಿನಂತಿಸಲಾಗಿದೆ. ಅರ್ಜಿಯ ನಮೂನೆಯನ್ನು ಸಂಘದ ಪಂಚಾಯತ್ ಘಟಕಗಳ ಯಾ ಫಿರ್ಕಾ ಸಂಘಗಳ ಕಾರ್ಯದರ್ಶಿಗಳನ್ನು ಸಂಪರ್ಕಿಸಬಹುದು.

