ಕಾಸರಗೋಡು: ದೈವೀ ಶಕ್ತಿಗೆ ಮಿಗಿಲಾದುದು ಪ್ರಪಂಚದಲ್ಲಿ ಬೇರೆ ಇಲ್ಲ. ಮಾನವ ಪ್ರಯತ್ನದಿಂದ ಎಷ್ಟೇ ಔನತ್ಯ ಸಾಧಿಸಿದರೂ ಭಗವಂತನ ಕೃಪೆ ಇಲ್ಲದಿದ್ದರೆ ಅದೆಲ್ಲವೂ ತೃಣ ಸಮಾನ. ಮಾನವ ಸಹಜವಾದ ಆಶೆ ಆಕಾಂಕ್ಷೆಗಳಿಗೆ ಬಲಿಯಾಗಿ ನಾವು ಮಾಡುವ ಯಾವುದೇ ತಾಂತ್ರಿಕ ಶಕ್ತಿಯಾದರೂ ಪ್ರಕೃತಿ ಮುನಿಸಿಕೊಂಡರೆ ನಾಶವಾಗಬಹುದು. ಆದರೆ ಭಕ್ತಿ ಶ್ರದ್ಧೆಯಿಂದ ನಾವು ಸಂಪಾದಿಸಿರುವ ದೇವಕೃಪೆ ಶಾಶ್ವತವಾಗಿದ್ದು ಅದು ನಮ್ಮನ್ನು ಕಾಲಕಾಲಕ್ಕೂ ರಕ್ಷಿಸಬಲ್ಲುದು ಎಂದು ಧಾರ್ಮಿಕ, ಸಾಮಾಜಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಅವರು ಹೇಳಿದರು.
ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ನೇತೃತ್ವದಲ್ಲಿ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು, ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಸಹಯೋಗದಲ್ಲಿ ಶ್ರೀ ರಾಮನಾಥ ಬಾಲಗೋಕುಲದ 17 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಹಾಗು ಎಂಟನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ಶ್ರೀಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಅವರು ಮಾತನಾಡಿದರು.
ಸಾರ್ವಕಾಲಿಕ ಮೌಲ್ಯವುಳ್ಳ ಶ್ರೀ ಕೃಷ್ಣ ಪರಮಾತ್ಮನ ತತ್ವಾದರ್ಶಗಳು ಜಗತ್ತಿಗೇ ಮಾರ್ಗದರ್ಶಕವಾಗಿದೆ. ಜಗತ್ತಿಗೇ ಗುರುವಾಗಿರುವ ಶ್ರೀ ಕೃಷ್ಣ ಪರಮಾತ್ಮನ ಪ್ರತೀ ಸಂದೇಶದಲ್ಲೂ ಧಾರ್ಮಿಕ ಜಾಗೃತಿಯ ಸೈದ್ಧಾಂತಿಕ ನಿಲುವಿದೆ ಹಾಗೂ ಸಾಮಾಜಿಕ ತತ್ವದ ಮತ್ತು ಬದ್ಧತೆಯ ಶ್ರೇಷ್ಠ ಸಾರವಿದೆ. ಶ್ರೀ ಕೃಷ್ಣ ಪರಮಾತ್ಮ ಅವತಾರ ಪುರುಷನಾಗಿದ್ದು, ಕೃಷ್ಣಾವತಾರ ಎಂದರೆ ಪೂರ್ಣ ಅವತಾರ ಎಂದೇ ಅರ್ಥ. ಶ್ರೀಕೃಷ್ಣನ ಭಗವದ್ಗೀತೆ ಸಂದೇಶ ಎಂದೆಂದಿಗೂ ಪ್ರಸ್ತುತತೆ ಪಡೆದಿದೆ. ಅರ್ಜುನನಿಗೆ ಶ್ರೀ ಕೃಷ್ಣ ಬೋ„ಸಿದ ಭಗವದ್ಗೀತೆಯನ್ನು ಪ್ರತಿಯೋರ್ವರೂ ಅಧ್ಯಯನ ಮಾಡಿಕೊಳ್ಳಬೇಕು. ಅಲ್ಲದೆ ಶ್ರೀಕೃಷ್ಣನ ಬಾಲ್ಯದ ತುಂಟಾಟದ ಪ್ರತೀ ಘಟನೆಗಳನ್ನು ಮನನ ಮಾಡಿಕೊಂಡಾಗ ಮಾತ್ರ ಅದರೊಳಗಿನ ಸಾರವನ್ನು ಪಡೆಯಲು ಸಾಧ್ಯ ಎಂದರು.
ದುಷ್ಕøತ್ಯ, ಸಾಮಾಜಿಕ ಅಸಮಾನತೆಗಳ ನಿಯಂತ್ರಣಕ್ಕೆ ಶ್ರೀ ಕೃಷ್ಣ ಹಾಕಿಕೊಟ್ಟ ಮೇಲ್ಪಂಕ್ತಿ ಸಾರ್ವಕಾಲಿಕವಾಗಿದ್ದು ಲೌಕಿಕದಾಚೆಗಿನ ಸುಖ ನೆಮ್ಮದಿಯು ಪರಮ ಧ್ಯೇಯವೆಂದು ಸಾರಿದ ತತ್ವಗಳು ಜಗತ್ತಿನ ಗಮನ ಸೆಳೆದವು. ಆಧುನಿಕತೆಯ ಗುಂಗಿನಲ್ಲಿ ಭಗವಂತನ ಸ್ಮರಣೆಗೆ ಜನ್ಮಾಷ್ಟಮಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸಮಾಜವನ್ನು ಭದ್ರಗೊಳಿಸುವಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಶ್ರೀ ಕೃಷ್ಣನ ತತ್ವಗಳು ಸಾರ್ವಕಾಲಿಕ ಸತ್ಯಗಳಾಗಿದ್ದು ಇಂದಿನ ಜೀವನಕ್ಕೆ ಅಳವಡಿಸಿಕೊಳ್ಳುವ ಅಗತ್ಯವಿದೆಯೆಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಕೇರಳ ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ.ನಾೈಕ್ ಅತಿಥಿಯಾಗಿ ಭಾಗವಹಿಸಿದರು. ಸಾಹಿತಿ, ಉದ್ಯಮಿ ರಂಗ ಶರ್ಮ ಉಪ್ಪಂಗಳ ಶುಭಹಾರೈಸಿದರು. ಅಷ್ಟಮಿ ಸಮಿತಿ ಅಧ್ಯಕ್ಷ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಿದರು. ಇದೇ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪಡೆದ ಸ್ಯಾಕ್ಸೋಫೆÇೀನ್ ವಾದಕ ಡಾ|ಉದಯ ಕಾಸರಗೋಡು ಅವರನ್ನು ಸಮ್ಮಾನಿಸಲಾಯಿತು. ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ಮಾತನಾಡಿದರು. ಶಿವರಾಮ ಕಾಸರಗೋಡು ಸ್ವಾಗತಿಸಿದರು. ದಿವಾಕರ ಅಶೋಕನಗರ ವಂದಿಸಿದರು. ಕಾವ್ಯ ಕುಶಲ, ಲತಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಜಯಾನಂದ ಕುಮಾರ್ ಹೊಸದುರ್ಗ ಪ್ರಾರ್ಥನೆ ಹಾಡಿದರು.
ಜಿಲ್ಲಾ ಮಟ್ಟದ ಶ್ರೀ ಕೃಷ್ಣ ವೇಷ ಸ್ಪರ್ಧೆ ಹಾಗು ಮೊಸರು ಕುಡಿಕೆ ಸ್ಪರ್ಧೆ ನಡೆಯಿತು. ದಯಾನಂದ ಬೆಳ್ಳೂರಡ್ಕ, ಹರಿಶ್ಚಂದ್ರ ಸೂರ್ಲು, ಗಣಪತಿ ಕೋಟೆಕಣಿ ಮೊದಲಾದವರು ಉಪಸ್ಥಿತರಿದ್ದರು.


