!
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಇಬ್ಬರು ನಾಗರಿಕರನ್ನು ಅಪಹರಿಸಿ ಭೀಕರವಾಗಿ ಕೊಲೆ ಗೈದಿದ್ದಾರೆ.
ಸೋಮವಾರ ಪುಲ್ವಾಮದಲ್ಲಿ ಅಬ್ ಖದೀರ್ ಕೊಹ್ಲಿ ಮತ್ತು ಮಂಜೂರ್ ಅಹ್ಮದ್ ಕೊಹ್ಲಿ ಎಂಬುವವರನ್ನು ಉಗ್ರರು ಅಪಹರಿಸಿದ್ದರು. ಈ ಸಂಬಂದ ಪೊಲೀಸ್ ದೂರು ಕೂಡ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ತ್ರಾಲ್ ನಲ್ಲಿರುವ ಲಾಚಿ ಟಾಪ್ ಬೆಹಕ್ ಅರಣ್ಯ ಪ್ರದೇಶದಲ್ಲಿ ನಿನ್ನೆ ಇಬ್ಬರ ಮೃತ ದೇಹ ಪತ್ತೆಯಾಗಿದೆ.
ಕೊಲೆಗೂ ಮುನ್ನ ಇಬ್ಬರ ಮೇಲೂ ಹಲ್ಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ದೇಹಗಳನ್ನು ಪೊಲೀಸರು ಸಂತ್ರಸ್ಥರ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಹರಣಕಾರ ಉಗ್ರರು ಮತ್ತು ಅವರಿಗೆ ನೆರವು ನೀಡಿದವರ ಕುರಿತು ತನಿಖೆ ನಡೆಸುತ್ತಿದ್ದಾರೆ.