HEALTH TIPS

ಪ್ರಾಚೀನ ಭಾರತದಲ್ಲಿ ಗೋಮಾಂಸ ಸೇವಿಸುವವರನ್ನು 'ಅಸ್ಪೃಶ್ಯ'ರೆಂದು ಕರೆಯಲಾಗಿತ್ತು: ಆರ್‍ಎಸ್‍ಎಸ್ ಮುಖಂಡ

 
      ನವದೆಹಲಿ: ಪ್ರಾಚೀನ ಭಾರತದಲ್ಲಿ ದನದ ಮಾಂಸ ತಿನ್ನುವವರನ್ನು  ಅಸ್ಪೃಶ್ಯರೆಂದು ಹಣೆಪಟ್ಟಿ ಕಟ್ಟಲಾಗಿತ್ತು. ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ 'ಅಸ್ಪೃಶ್ಯತೆ' ಮತ್ತು 'ದಲಿತ' ಪದಗಳು ಅಸ್ತಿತ್ವದಲ್ಲಿಲ್ಲ ಎಂದು ಹಿರಿಯ ಆರ್‍ಎಸ್‍ಎಸ್ ಮುಖಂಡರೊಬ್ಬರು ಹೇಳಿದ್ದಾರೆ.
     ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‍ಎಸ್‍ಎಸ್) ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್, ಸಂವಿಧಾನ ಸಭೆಯು ಸಹ 'ದಲಿತ' ಗಿಂತ 'ಪರಿಶಿಷ್ಟ ಜಾತಿ' ಎಂಬ ಪದವನ್ನು ಬಳಸಲು ಆದ್ಯತೆ ನೀಡಲಾಗಿತ್ತು ಎಂದು ಗಮನ ಸೆಳೆದರು. "ಬ್ರಿಟಿಷರ ಪಿತೂರಿಯೇ ದಲಿತ ಪದವನ್ನು (ಸಮಾಜದಲ್ಲಿ) ಬೇರುಬಿಡುವಂತೆ ಮಾಡಿದೆ." ಎಂದು ಅವರು ಹೇಳಿದರು.
      ಆರ್‍ಎಸ್‍ಎಸ್ ಮುಖಂಡರು 'ಭಾರತ್ ಕಾ ರಾಜನೈತಿಕ್ ಉತ್ತರರಾಯಣ್' ಮತ್ತು ಭಾರತ್ ಕಾ ದಲಿತ ವಿಮರ್ಷ 'ಪುಸ್ತಕಗಳನ್ನು ಅನಾವರಣಗೊಳಿಸಿದರು.ಈ ಸಂದರ್ಭದಲ್ಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಸಹ ಉಪಸ್ಥಿತರಿದ್ದರು. "ಭಾರತದಲ್ಲಿ ಅಸ್ಪೃಶ್ಯತೆಗೆ ಮೊದಲ ಉದಾಹರಣೆ ದನದ ಮಾಂಸ ಸೇವಿಸುವರಾಗಿದ್ದಾರೆ. ಏಕೆಂದರೆ ಅಂತಹವರಿಗೆ ಅಸ್ಪೃಶ್ಯರೆಂದು ಕರೆಯುತ್ತಾರೆ.ಬಿಆರ್ ಅಂಬೇಡ್ಕರ್ ಸಹ ಇದನ್ನು ಬರೆದಿದ್ದಾರೆ ಎಂದ ಅವರು ಪ್ರಾಚೀನ ಕಾಲದಲ್ಲಿ ಕೇವಲ ದನದ ಮಾಂಸ ಸೇವನೆ ಮಾಡುವವರನ್ನೇ ಅಸ್ಪೃಶ್ಯರೆಂದು ಕರೆಯಲಾಗುತ್ತಿದ್ದು ಕ್ರಮೇಣ ಇದು ಜನರ ಮನಸ್ಸಿನಲ್ಲಿ ನಾನಾ ರೂಪದಲ್ಲಿ, ಸ್ವರೂಪದಲ್ಲಿ ಬೇರೂರಿತು. ಸಮಾಜದ ಹೆಚ್ಚಿನ ಭಾಗವನ್ನು ಅಸ್ಪೃಶ್ಯರೆಂದು ಬ್ರಾಂಡ್ ಮಾಡಲಾಯಿತು ಎಂದು ಅವರು ಅಭಿಪ್ರಾಯಪಟ್ಟರು.
        ದಲಿತರೆಂದೆನಿಸಿದವರು ದೀರ್ಘಕಾಲ ದಬ್ಬಾಳಿಕೆಗೆ ಒಳಗಾಗಿದ್ದರು ಮತ್ತು ಅವಮಾನಿಸಲ್ಪಟ್ಟರು. ರಾಮಾಯಣವನ್ನು ಬರೆದ ವಾಲ್ಮೀಕಿ ಓರ್ವ ಋಷಿ, ಆತ ದಲಿತನಲ್ಲ, ಅವನೊಬ್ಬ ಶೂದ್ರ. ಅನೇಕ ಮಹಾನ್ ಋಷಿಗಳೂ ಶೂದ್ರರಾಗಿದ್ದರು.ಆದರೆ ಅವರನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತಿತ್ತು  ಎಂದು ಗೋಪಾಲ್ ಹೇಳಿದರು.
     ನಾಲ್ಕು ವರ್ಣಗಳಲ್ಲಿ ಶೂದ್ರ ಒಂದು, ಉಳಿದ ಮೂರು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ. ಶೂದ್ರರು ಇದು ವರ್ಣ ಕ್ರಮದಲ್ಲಿ ಅತ್ಯಂತ ಕೆಳಗಿನವರು. ಭಾರತದಲ್ಲಿ, ಅಸ್ಪೃಶ್ಯತೆಯನ್ನು 1955 ರ ಅಸ್ಪೃಶ್ಯತೆ (ಅಪರಾಧಗಳು) ಕಾಯ್ದೆಯ ಮೂಲಕ ನಿಷೇಧಿಸಲಾಯಿತು, ನಂತರ ಇದನ್ನು ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಎಂದು ಕರೆಯಲಾಯಿತು. 8 ನೇ ಶತಮಾನದಲ್ಲಿ ರಾಜಾ ದಾಹಿರ್ನ ಅವಧಿಯಲ್ಲಿ ಇಸ್ಲಾಮಿಕ್ ಆಕ್ರಮಣದ ಸಮಯದಲ್ಲಿ ಅಸ್ಪೃಶ್ಯತೆಗೆ ಮತ್ತೊಂದು ಉದಾಹರಣೆ ಸಿಗುತ್ತದೆ ಎಂದ ಗೋಪಾಲ್ದಾಹೀರ್ ಸಿಂಧ್ ನ ಹಿಂದೂ ರಾಜ ಮತ್ತು ಮೊಹಮ್ಮದ್-ಬಿನ್ ಕಾಸಿಮ್ ನನ್ನು ಪರಾಜಿತಗೊಳಿಸಿದ್ದನು. ಇದು ಭಾರತದ ಮೊದಲ ಇಸ್ಲಾಮಿಕ್ ಆಕ್ರಮಣ ಎಂದು ಗುರುತಿಸಲ್ಪಟ್ಟಿದೆ.ದಾಹಿರ್ ರಾಣಿಯರು ಆಕ್ರಮಣಕಾರರಿಂದ ಸ್ಪರ್ಶಿಸಲ್ಪಟ್ಟರೆ ಅವರು 'ಅಸ್ಪೃಶ್ಯರು' ಆಗುತ್ತಾರೆ ಎಂದು ತಮ್ಮನ್ನು ತಾವು ಬೆಂಕಿಗೆ ಸಮರ್ಪಿಸಿಕೊಳ್ಳುತ್ತಾರೆ ಎಂದು ಅವರು ವಿವರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries