ಮಂಜೇಶ್ವರ: ಜ್ಞಾನೋದಯ ಸಮಾಜ ದೈಗೋಳಿಯ ಆಶ್ರಯದಲ್ಲಿ 38 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.2 ರಂದು ಶ್ರೀ ಗಣೇಶ ಮಂದಿರದಲ್ಲಿ ನಡೆಯಲಿದೆ.
ಬೆಳಿಗ್ಗೆ 8.30 ಕ್ಕೆ ವೇದಮೂರ್ತಿ ಕೆ.ರಾಮಮೂರ್ತಿ ಕುರಿಯ ಅವರಿಂದ ಶ್ರೀ ಗಣೇಶ ವಿಗ್ರಹ ಪ್ರತಿಷ್ಠಾಪನೆ, ಮಹಾಗಣಪತಿ ಹೋಮ, ಭಕ್ತಿಗೀತೆ ಸ್ಪರ್ಧೆ, ಭಜನಾ ಕಾರ್ಯಕ್ರಮ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಪ್ರಸಾದ ಭೋಜನ, ಛದ್ಮವೇಷ ಸ್ಪರ್ಧೆ, ಮಡಿಕೆ ಒಡೆಯುವ ಸ್ಪರ್ಧೆ, ಸಂಗೀತ ಕುರ್ಚಿ, ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಸಂಜೆ 4.30 ಕ್ಕೆ ಬಹುಮಾನ ವಿತರಣೆ, ಮಹಾಮಂಗಳಾರತಿ, ನಂತರ 5.30 ಕ್ಕೆ ಶೋಭಾಯಾತ್ರೆ ನಡೆಯುವುದು.

