ಕುಂಬಳೆ: ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಕಣಿಪುರ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಶ್ರೀ ಬೊಡ್ಡಜ್ಜ ಯಕ್ಷ ಭಾರತಿ ಮಧೂರು ಇವರಿಂದ ಶ್ರೀಕೃಷ್ಣ ಲೀಲೆ - ಕಂಸ ವಧೆ ಎಂಬ ಯಕ್ಷಗಾನ ತಾಳ ಮದ್ದಳೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಸಂಜೀವ ನಾೈಕ್, ಚೆಂಡೆಯಲ್ಲಿ ನಟರಾಜ ಕಲ್ಲೂರಾಯ, ಮದ್ದಳೆಯಲ್ಲಿ ಈಶ್ವರ ಮಲ್ಲ, ಮುಮ್ಮೇಳದಲ್ಲಿ ಶ್ರೀಧರ ರಾವ್ ಕುಂಬಳೆ, ಪ್ರತಾಪ್ ಕುಂಬಳೆ, ತಾರಾನಾಥ್ ಮಧೂರು, ವಾಮನ ಆಚಾರ್ಯ ಬೋವಿಕ್ಕಕಾನ, ಸುಧಾ ನಟರಾಜ ಕಲ್ಲೂರಾಯ, ಉದಯ ಶಂಕರ ಭಟ್ ಮಜಲು ಸಹಕರಿಸಿದರು. ನಿವೃತ್ತ ಉಪಜಿಲ್ಲಾಧಿಕಾರಿ ಬಾಲಕೃಷ್ಣ ಅಗ್ಗಿತ್ತಾಯ ಪ್ರಾಸ್ತಾವಿಕ ಮಾತನಾಡಿದರು. ಸುರೇಶ್ ಸ್ವಾಗತಿಸಿ, ದಯಾನಂದ ವಂದಿಸಿದರು.


