ಕಾಸರಗೋಡು: ಜಿಲ್ಲೆಯ 335 ವಿಶೇಷ ಚೇತನರಿಗೆ ವಿವಿಧ ಸಹಾಯಕ ಉಪಕರಣಗಳ ವಿತರಣೆ ಆ.16 ರಂದು ನಡೆಯಲಿದೆ.
ಜಿಲ್ಲಾಡಳಿತೆ ವಿಶೇಷ ಚೇತನರಿಗಾಗಿ ಜಾರಿಗೊಳಿಸುವ ವೀ ಡಿಸರ್ವ್ ಯೋಜನೆ ಅಂಗವಾಗಿ ಕೇರಳ ಸಾಮಾಜಿಕ ಸುರಕ್ಷಾ ಮಿಷನ್ ಮೂಲಕ ಈ ವಿತರಣೆ ನಡೆಸಲಿದೆ. ಗಾಲಿಕುರ್ಚಿ, ಎಂ.ಆರ್.ಕಿಟ್, ಬ್ರೈಲಿಕೈನ್, ಶ್ರವಣಯಂತ್ರ ವಿವಿಧ ರೀತಿಯ ಕ್ರಚ್ಚಸ್ ಇತ್ಯಾದಿ ಉಪಕರಣಗಳ ವಿತರಣೆ ಈ ಸಂದರ್ಭ ನಡೆಯಲಿದೆ. ಕೇಂದ್ರ ಸರಕಾರಿ ಸಂಸ್ಥೆ ಅಲಿನ್ ಕೋ ಇದಕ್ಕಾಗಿ ಮೊಬಲಗು ಮಂಜೂರು ಮಾಡಿದೆ. ಜಿಲ್ಲಾಡಳಿತೆ ವಿಶೇಷ ಚೇತನರಿಗಾಗಿ ಜಾರಿಗೊಳಿಸುವ ವಿ ಡಿಸರ್ವ್ ಯೋಜನೆ ಪ್ರಕಾರ 3416 ಮಂದಿಯನ್ನು ತಪಾಸಣೆಗೊಳಪಡಿಸಲಾಗಿತ್ತು. ಮೊದಲ ಹಂತದಲ್ಲಿ 1433 ಮಂದಿಗೆ ವೈದ್ಯಕೀಯ ಮಂಡಳಿಯ ಅರ್ಹತಾಪತ್ರ ನೀಡಲಾಗಿದೆ. ಕೇಂದ್ರ ಸರಕಾರದ ಎ.ಡಿ.ಐ.ಪಿ. ಯೋಜನೆಯೊಂದಿಗೆ ಸಹಕರಿಸಿ ವಿ ಡಿಸರ್ವ್ ಯೋಜನೆ ಜಾರಿಗೊಳಿಸಲಾಗುತ್ತದೆ. ಜಿಲ್ಲೆಯ ವಿವಿಧ ವಿವಿಧ ಗ್ರಾಮ ಪಂಚಾಯತ್‍ಗಳಲ್ಲಿ ನಡೆಸಲಾದ ವಿಶೇಷ ಚೇತನತೆ ಪತ್ತೆ ತಪಾಸಣೆ ಶಿಬಿರಗಳಲ್ಲಿ 18672 ಮಂದಿ ಹೆಸರು ನೋಂದಣಿ
ನÀಡೆಸಿದ್ದಾರೆ. ಮೊದಲ ಹಂತದಲ್ಲಿ 1535 ಮಂದಿಯನ್ನು ತಪಾಸಣೆಗೊಳಪಡಿಸಲಾಗಿತ್ತು. ದ್ವಿತೀಯ ಹಂತದಲ್ಲಿ 1846 ಮಂದಿಯನ್ನು ತಪಾಸಣೆ ಮಡಲಾಗಿತ್ತು. ಈ ಹಿಂದೆ 48 ಮಂದಿಗೆ ಈ ಯೋಜನೆ ಪ್ರಕಾರ ಸಹಾಯಕ ಉಪಕರಣಗಳನ್ನು ವಿತರಿಸಲಾಗಿತ್ತು.
ಪಡನ್ನ ನೆಹರೂ ಕಲಾ-ವಿಜ್ಞಾನ ಕಾಲೇಜಿನಲ್ಲಿ ಆ.16ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾರಂಭವನ್ನು ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು.

