ಕಾಸರಗೋಡು: ಬಿರುಸಿನ ಮಳೆ ಮತ್ತು ನೆರೆ ಹಾವಳಿಯಿಂದ ಕಂಗೆಟ್ಟ ಪ್ರದೇಶಗಳ ಶುಚೀಕರಣ ಇತ್ಯಾದಿ ಚಟುವಟಿಕೆಗಳಿಗೆ ಜಿಲ್ಲೆಯ ಯೂತ್ ಕ್ಲಬ್‍ಗಳು ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆಗ್ರಹಿಸಿದರು.
ನೆಹರೂ ಯುವಕೇಂದ್ರ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಯೂತ್‍ಕ್ಲಬ್ ಪ್ರತಿನಿಧಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಈ ಚಟುವಟಿಕೆಗಳಲ್ಲಿ ನಿರತವಾಗಿರುವ ಕೆಲವು ಯೂತ್ ಕ್ಲಬ್‍ಗಳನ್ನು ಜಿಲ್ಲಾಧಿಕಾರಿ ಈ ಸಂದರ್ಭ ಶ್ಲಾಘಿಸಿದರು. ಜಿಲ್ಲಾ ಯೂತ್ ಸಂಚಾಲಕ ಎಂ.ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್, ಯೋಜನೆ ಪ್ರಬಂಧಕ ಪಿ.ಶ್ರೀಜಿತ್ ಉಪಸ್ಥಿತರಿದ್ದರು. ಎ.ದಿವ್ಯಾ ಸ್ವಾಗತಿಸಿ, ಎಂ.ಯಶೋದಾ ವಂದಿಸಿದರು.

