ಪೆರ್ಲ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಣ್ಮಕಜೆ ಗ್ರಾ.ಪಂ. ಕಾರ್ಯಾಲಯದಲ್ಲಿ ಗುರುವಾರ ಬೆಳಿಗ್ಗೆ ಧ್ವಜಾರೋಹಣ ನಡೆಯಿತು. ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ, ಉಪಾಧ್ಯಕ್ಷ ಸಿದ್ದೀಖ್ ಹಾಜಿ ಖಂಡಿಗೆ, ಗ್ರಾ.ಪಂ. ಸಹಾಯಕ ಕಾರ್ಯದರ್ಶಿ ಅಬ್ದುಲ್ ಲತೀಫ್, ನೌಕರರಾದ ರಾಜರತ್ನ, ಸುಜಿ, ನವಾಝ್, ಬಾಲಕೃಷ್ಣ ಕುಲಾಲ್, ಕಮಲಾಕ್ಷ ಮೊದಲಾದವರು ಉಪಸ್ಥಿತರಿದ್ದರು.