ಬದಿಯಡ್ಕ: ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ 59ನೇ ಚಾತುರ್ಮಾಸ್ಯ ವೃತಾಚರಣೆಯ ಅಂಗವಾಗಿ ನಡೆಯುತ್ತಿರುವ ಸಾಂಸ್ಕøತಿಕ ವೈವಿಧ್ಯದ ಭಾಗವಾಗಿ ಬುಧವಾರ ರಾತ್ರಿ ಶ್ರೀಗಳ ನಿರ್ದೇಶನದಲ್ಲಿ ಎಡನೀರು ಶ್ರೀಗೋಪಾಲಕೃಷ್ಣ ಕೃಪಾಪೋಶಿತ ಯಕ್ಷಗಾನ ಮಂಡಳಿಯವರಿಂದ ಸುದರ್ಶನ-ಭಾರ್ಗವ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ದಿನೇಶ ಅಮ್ಮಣ್ಣಾಯ, ರಮೇಶ್ ಭಟ್ ಪುತ್ತೂರು, ವೆಂಕಟರಮಣ ಭಟ್ ತಲ್ಪನಾಜೆ ಭಾಗವತಿಕೆಯಲ್ಲಿ ಹಾಗೂ ಚೆಮಡೆ-ಮದ್ದಳೆಗಳಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಕೃಷ್ಣಪ್ರಕಾಶ ಉಳಿತ್ತಾಯ, ಲವಕುಮಾರ ಐಲ, ಲಕ್ಷ್ಮೀಶ ಬೇಂಗ್ರೋಡಿ ಮತ್ತು ಚಕ್ರತಾಳದಲ್ಲಿ ನಿಶ್ವತ್ ಸಹಕರಿಸಿದರು. ಮುಮ್ಮೇಳದಲ್ಲಿ ಕುಂಬಳೆ ಶ್ರೀಧರ ರಾವ್, ಗುಂಡಿಮಜಲು ಗೋಪಾಲ ಭಟ್, ಉಬರಡ್ಕ ಉಮೇಶ ಶೆಟ್ಟಿ, ಶಂಭಯ್ಯ ಭಟ್ ಕಂಜರ್ಪಣೆ, ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಮೋಹನಕುಮಾರ್ ಅಮ್ಮುಂಜೆ, ಬಾಲಕೃಷ್ಣ ಮಣಿಯಾಣಿ ಮವ್ವಾರು, ನಾ.ಕಾರಂತ ಪೆರಾಜೆ, ಬಾಲಕೃಷ್ಣ ಸೀತಾಂಗೋಳಿ, ಮಾಧವ ಪಾಟಾಳಿ ನೀರ್ಚಾಲು, ಲಕ್ಷ್ಮಣ ಕುಮಾರ್ ಮರಕಡ, ಶೇಖರ ಜಯನಗರ, ರಕ್ಷಿತ್ ದೇಲಂಪಾಡಿ, ಗಣೇಶ ಪಾಲೆಚ್ಚಾರು, ಮನೀಶ್ ಎಡನೀರು, ಗುರುತೇಜ ಒಡಿಯೂರು, ಪವನ್, ಪ್ರಣವ್ ಕೃಷ್ಣ, ಕಿಶನ್ ಅಗ್ಗಿತ್ತಾಯ ಮೊದಲಾದವರು ಪಾತ್ರಗಳಿಗೆ ಜೀವ ತುಂಬಿದರು.
ಕಾರ್ಯಕ್ರಮದ ಅಂಗವಾಗಿ ಸಂಜೆ ಭಜನಾ ಸತ್ಸಂಗ, ಶ್ರೀಗಳಿಂದ ಅನುಗ್ರಹ ಸಂದೇಶ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಗುರುವಾರ ಸಂಜೆ ಲಯಲಹರಿ ಸಂಗೀತ ವಾದ್ಯೋಪಕರಣಗಳ ಗೋಷ್ಠಿ ನಡೆಯಿತು. ಇಂದು ಪ್ರಸಿದ್ದ ಕಲಾವಿದರುಗಳಿಂದ ಯಕ್ಷ-ಗಾನ ಸಿಂಚನ ನಡೆಯಲಿದೆ. ಭಾಗವತಿಕೆಯಲ್ಲಿ ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ ಹಾಗೂ ಚೆಂಡೆ-ಮದ್ದಳೆಗಳಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಸುನಿಲ್ ಭಂಡಾರಿ, ಕೃಷ್ಣಪ್ರಕಾಶ ಉಳಿತ್ರತಾಯ, ಲವಕುಮಾರ ಐಲ ಭಾಗವಹಿಸುವರು.



