ಮಂಜೇಶ್ವರ: ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕವಾಗಿ ಸಿಂಹಮಾಸ ಪ್ರತಿ ಶನಿವಾರಗಳಲ್ಲಿ ಬಲಿವಾಡುಕೂಟ ನಡೆಯುತ್ತಿದ್ದು ಆ ದಿನಗಳಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಭಕ್ತರ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನಡೆಸುತ್ತಾ ಬರಲಾಗುತ್ತಿದೆ. ಈ ಬಾರಿಯ ಸರಣಿ ಸಾಂಸ್ಕøತಿಕ ಕಾರ್ಯಕ್ರಮಗಳ ಹಾಗೂ ಯಕ್ಷಬಳಗ ಹೊಸಂಗಡಿ ತಂಡದ ಆಷಾಡ ಮಾಸ ಸರಣಿ ತಾಳಮದ್ದಳೆ ಕೂಟಗಳ ಸಮಾರೋಪ ಸಮಾರಂಭದ ಸಂಯುಕ್ತ ಉದ್ಘಾಟನೆಯನ್ನು ಖ್ಯಾತ ಯಕ್ಷಗಾನ ವಿದ್ವಾಂಸ ಹಾಗೂ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಇತ್ತೀಚೆಗೆ ದೀಪಬೆಳಗಿಸಿ ನೆರವೇರಿಸಿದರು.
ಸಮಾರಂಭದಲ್ಲಿ ಸಿರಿಬಾಗಿಲು ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಯಕ್ಷಭಾರತಿ ಹೂಹಾಕುವ ಕಲ್ಲು ಸಂಸ್ಥೆಯ ಸಂಚಾಲಕ ರಾಘವದಾಸ್ ಬಜ್ಪೆ, ಯಕ್ಷಬಳಗದ ಸಂಚಾಲಕ ಸತೀಶ ಅಡಪ ಸಂಕಬೈಲು, ಶ್ರೀಕ್ಷೇತ್ರದ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಉಪಸ್ಥಿತರಿದ್ದರು. ನಾಗರಾಜ ಪದಕಣ್ಣಾಯ ಕಾರ್ಯಕ್ರಮ ನಿರ್ವಹಿಸಿದರು.


