ಮಂಜೇಶ್ವರ: ಸದ್ಗುಣಗಳನ್ನು ಹೊಂದಿದ ಸಮಾಜವನ್ನು ಸೃಷ್ಟಿಸುವಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ. ದುಷ್ಟರನ್ನು, ಧರ್ಮ ದ್ವಂಸಕರನ್ನು ಶಿಕ್ಷಿಸುವಲ್ಲಿ ಯುವಕರು ಪಾತ್ರವಹಿಸಬೇಕು ಎಂದು ಕಣಿಯೂರು ಶ್ರೀಚಾಮುಂಡೇಶ್ವರಿ ಕ್ಷೇತ್ರದ ಶ್ರೀಮಹಾಬಲ ಸ್ವಾಮೀಜಿ ತಿಳಿಸಿದರು.
ಹೊಸಂಗಡಿ ಶ್ರೀಅಯ್ಯಪ್ಪ ಕ್ಷೇತ್ರದಲ್ಲಿ ಶ್ರೀಅಯ್ಯಪ್ಪ ಪ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಶುಕ್ರವಾರ ನಡೆದ ಎಂಟನೇ ವರ್ಷದ ಹೊಸಂಗಡಿ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಶುಕ್ರವಾರ ಸಂಜೆ ನಡೆದ ಧಾರ್ಮಿಕ ಸಭೆಯನ್ನು ದಿಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಶ್ರೀಕೃಷ್ಣ ಭಗವಾನನು ಅರ್ಧವೆಂಬ ಕಂಸನನ್ನು ತಮ್ಮ ಮಾವನಾದರೂ ನಾಶಗೊಳಿಸುತ್ತಾನೆ ಎಂಬ ಅಲೌಕಿಕ ಚಿಂತನ ಸಮದೇಶವನ್ನು ನೀಡಿರುತ್ತಾನೆ. ಧರ್ಮಕ್ಕೆ ಚ್ಯುತಿ ಬಂದೊದಗಿದಾಗ ಧರ್ಮ ಸಂರಕ್ಷಣೆಗೆ ಒಗ್ಗಟ್ಟಿನಿಂದ ಕೈಜೋಡುವ ಕೆಲಸಗಳಾಗಬೇಕು ಎಂದ ಅವರು ಯುವ ಸಮೂಹ ಈ ನಿಟ್ಟಿನಲ್ಲಿ ಕಟಿಬದ್ದರಾಗಿರಬೇಕು ಎಂದು ಕರೆನೀಡಿದರು.
ಅಯ್ಯಪ್ಪ ಪ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ನ್ಯಾಯವಾದಿ ನವೀನ್ ರಾಜ್ ಕೆ.ಜೆ. ಅಧ್ಯಕ್ಷತೆ ವಹಿಸಿದ್ದರು. ವಿಹಿಂಪ ಮಾತೃಶಕ್ತಿ ಸಮಿತಿ ಮಂಗಳೂರು ಗ್ರಾಮಾಂತರದ ಅಧ್ಯಕ್ಷೆ ಮೀರಾ ಆಳ್ವ, ಸೇವಾ ಭಾರ್ಗವ ಹರೀಶ್ ಶೆಟ್ಟಿ ಮಾಡ, ಹೊಸಂಗಡಿ ಶ್ರೀಅಯ್ಯಪ್ಪ ಕ್ಷೇತ್ರದ ಗುರುಸ್ವಾಮಿ ಉದಯ ಪಾವಳ,ಅಧ್ಯಕ್ಷ ಪದ್ಮನಾಭ ಕಡಪ್ಪುರ, ಮಹಿಳಾ ಸಮಿತಿ ಅಧ್ಯಕ್ಷೆ ಚಂಚಲಾಕ್ಷಿ ಕಡಪ್ಪುರ, ಆದರ್ಶ ಬಿ.ಎಂ. ಹೊಸಂಗಡಿ, ಅಧ್ಯಕ್ಷ ಸಂದೀಪ್ ಶಾಂತಿನಗರ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ಸರ್ಕಾರಿ ಶಾಲೆಯಲ್ಲಿಕಲಿಯುತ್ತಿರುವ ಆರು ಮಂದಿ ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ಹಾಗೂ ಕಲಿಕೋಪಕರಣಗಳನ್ನು ವಿತರಿಸಿ ಪ್ರೋತ್ಸಹಿಸುವ ವಿದ್ಯಾಜ್ಯೋತಿ ಕಾರ್ಯಕ್ರಮವನ್ನು ಕಾಣಿಯೂರು ಶ್ರೀಗಳು ನೆರವೇರಿಸಿದರು.
ಬೆಳಿಗ್ಗೆ ಶ್ರೀಕ್ಷೇತ್ರದ ಗುರುಸ್ವಾಮಿ ಉದಯ ಪಾವಳ ಹಾಗೂ ಉದ್ಯಾವರ ಮಾಡ ಶ್ರೀಅರಸು ಮಂಜಿಷ್ಣಾರು ದೈವ ಕ್ಷೇತ್ರದ ಅಣ್ಣವ ದೈವಗಳ ಪಾತ್ರಿ ರಾಜ ಬೆಳ್ಚಪ್ಪಾಡ ದೀಪ ಬೆಳಗಿಸಿ ಉದ್ಘಾಟಿಸಿದರು. ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಬಾಲಕೃಷ್ಣ ವೇಶ ಸ್ಪರ್ಧೆಗಳು ನಡೆಯಿತು. ಧಾಮಿರ್ಒಕ ಸಭಾ ಕಾರ್ಯಕ್ರಮದಲ್ಲಿ ದಿನಕರ ಬಿ.ಎಂ.ಸ್ವಾಗತಿಸಿ, ವಂದಿಸಿದರು. ದಿವಾಕರ ಪ್ರತಾಪನಗರ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ಬಂಗ್ರಮಂಜೇಶ್ವರ ಶ್ರೀಕಾಳಿಕಾ ಪರಮೇಶ್ವರಿ ಕ್ಷೇತ್ರದಿಂದ ಹೊಸಂಗಡಿಯ ವರೆಗೆ ಬೀದಿ ಮೊಸರು ಕುಡಿಕೆ ಉತ್ಸವ ನಡೆಯಿತು.ರಾತ್ರಿ ವಿವಿಧ ಭಜನಾ ಸಂಘಹಳಿಂದ ಭಜನಾ ಸಂಕೀರ್ತನೆಗಳು ನೆರವೇರಿತು. ಮಧ್ಯರಾತ್ರಿ ಕುಣಿತು ಭಜನೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.


