ಮಂಜೇಶ್ವರ: ಧರ್ಮವನ್ನು ಉಳಿಸಬೇಕಾದರೆ ಧಾರ್ಮಿಕ ಆಚಾರ ವಿಚಾರಗಳನ್ನು ತಿಳಿದುಕೊಂಡು ಅವುಗಳನ್ನು ನಮ್ಮ ಸಂಸ್ಕøತಿಯೆಂದು ಮನಗಂಡು ಬದುಕಿನುದ್ದಕ್ಕೂ ಆಚರಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದು ಚುಟುಕು ಸಾಹಿತಿ ಶಿಕ್ಷಕ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ತಿಳಿಸಿದರು.
ನಂದನ ಬಾಲಗೋಕುಲ ಸಮಿತಿ ಪೆರ್ಮುದೆ ಇವರು ಶುಕ್ರವಾರ ಆಯೋಜಿಸಿದ ಎಂಟನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಆಚರಣೆಯ ಸಂದರ್ಭದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪ್ರಕೃತಿ ವಿಕೋಪಗಳನ್ನು ನಾವು ಕಾಣುತ್ತಿದ್ದೇವೆ. ನಮ್ಮದು ಖುಷಿ ಮತ್ತು ಕೃಷಿ ಸಂಸ್ಕøತಿ. ಆದರೆ ಈಗೀಗ ನಾವು ಪ್ರಕೃತಿಯ ಮೇಲೆ ಆಕ್ರಮಣ ಮಾಡುತ್ತಿರುವ ಕಾರಣ ಈ ತೊಂದರೆಗೆ ಸಿಲುಕುತ್ತಿದ್ದೇವೆ. ನಾವು ಪ್ರಕೃತಿಯಲ್ಲಿ ದೇವರನ್ನು ಕಂಡು ಅದನ್ನು ಸಂರಕ್ಷಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ನಮಗೂ ಉಳಿಗಾಲ ಎಂದು ಅವರು ಈ ಸಂದರ್ಭ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಶವ ಪೆರ್ಮುದೆ ವಹಿಸಿದ್ದರು. ಅಧ್ಯಾಪಕ ಶ್ರೀನಿವಾಸ ನಾಯಕ್ ಮತ್ತು ರಾಮಚಂದ್ರ ಆಚಾರ್ಯ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಮತ್ತು ಶ್ರೀಕೃಷ್ಣ ವೇಷಧಾರಿ ಪುಟಾಣಿಗಳಿಗೂ ಬಹುಮಾನ ವಿತರಿಸಲಾಯಿತು.


