ಬದಿಯಡ್ಕ: ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಶಿಕ್ಷಕರ ಜೊತೆ ರಕ್ಷಕರೂ ಹೆಚ್ಚಿನ ಶ್ರಮವಹಿಸಬೇಕೆಂದು ಪೆರಡಾಲ ಸರಕಾರಿ ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ನೂತನ ಅಧ್ಯಕ್ಷ ಎನ್.ಪಿ.ಬಡುವನ್ ಕುಂಞÂ ಅಭಿಪ್ರಾಯಪಟ್ಟರು. ಶಾಲೆಯ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕೆಂದು ಅವರು ವಿನಂತಿಸಿದರು.
ಅವರು ಪೆರಡಾಲ ಶಾಲಾ ರಕ್ಷಕ ಶಿಕ್ಷಕ ಸಂಘದ ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಮಾತನಾಡಿದರು.
ಸಂಘದ ಉಪಾಧ್ಯಕ್ಷರಾಗಿ ರಾಮ ಎಂ. ಹಾಗೂ ಮೊೈದು ಪಳ್ಳತ್ತಡ್ಕ ಆಯ್ಕೆಯಾದರು. ಮಾತೃ ರಕ್ಷಕ ಸಂಘದ ಅಧ್ಯಕ್ಷೆಯಾಗಿ ತಾಹಿರಾ ಹನೀಫ್ ಆರಿಸಲ್ಪಟ್ಟರು. ಶಾಲಾ ಮುಖ್ಯಶಿಕ್ಷಕ ರಾಜಗೋಪಾಲ ಯೋಜನೆಗಳ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ಶಾಂತಾಮಣಿ ಗತವರ್ಷದ ಸಮಗ್ರ ವರದಿ ಮಂಡಿಸಿದರು. ರಾಜಗೋಪಾಲ ಅವರು ಲೆಕ್ಕಪತ್ರವನ್ನು ಮಂಡಿಸಿದರು. ಗ್ರಾಮ ಪಂಚಾಯತಿ ಸದಸ್ಯೆ ಶಾಂತಾ, ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ರಹಿಮಾನ್, ರಾಮ, ಇಬ್ರಾಹಿಂ ಮೊೈದು ಶುಭಾಶಂಶನೆಗೈದರು. ಇಪ್ಪತ್ತೊಂದು ಸದಸ್ಯರ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಚಂದ್ರಹಾಸ ನಂಬಿಯಾರ್ ವಂದಿಸಿದರು. ಪ್ರಮೋದ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ರಿಶಾದ್, ಶ್ರೀಧರನ್, ದಿವ್ಯಗಂಗಾ,ದುರ್ಗಾಪರಮೇಶ್ವರಿ, ಬಿಂದು, ಲಲಿತಾಂಬಾ, ಜಯಲತ, ಲಿಬಿಜಾ, ಬೀನಾ, ಗೋಪಾಲಕೃಷ್ಣ ಭಟ್, ಅಜೀಜ್, ಚಂದ್ರಶೇಖರ ಸಹಕರಿಸಿದರು.


