ಕುಂಬಳೆ: ಪುತ್ತಿಗೆ ಗ್ರಾಮಪಂಚಾಯತಿಯ ಕುಟುಂಬಶ್ರೀ ಸಿ.ಡಿ.ಎಸ್. ವತಿಯಿಂದ "ಮಳೆಗಾಲದ ಸೊಬಗು-2019" ಎಂಬ ಹೆಸರಿನ ಕೃಷಿಕೋತ್ಸವ ಕಾರ್ಯಕ್ರಮ ಬಾಡೂರು ಚೇಕಟ್ಟೆಚ್ಚಾಲ್ ಬಯಲಿನಲ್ಲಿ ನಡೆಯಿತು.
ಸಮೃದ್ಧಿ ಜೆ.ಎಲ್.ಜಿ. ಶಿಬಿರದ ಅಂಗವಾಗಿ ಬಂಜರುಭೂಮಿಯನ್ನು ಕೃಷಿಗಾಗಿ ಹಸನುಗೊಳಿಸುವ ಕಾರ್ಯಕ್ರಮದ ಭಾಗವಾಗಿ ಈ ಸಮಾರಂಭ ಜರುಗಿತು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಕಾರ್ಯಕ್ರಮ ಉದ್ಘಾಟಿಸಿದರು. ಪುತ್ತಿಗೆ ಗ್ರಾಮಪಂಚಾಯತಿ ಅಧ್ಯಕ್ಷೆ ಅರುಣಾ ಜೆ., ಉಪಾಧ್ಯಕ್ಷ ಪಿ.ಬಿ.ಮಹಮ್ಮದ್, ಸ್ಥಾಯೀ ಸಮಿತಿ ಅಧ್ಯಕ್ಷ ಚನಿಯ ಪಾಡಿ, ಜಯಂತಿ, ಶಾಂತಿ ವೈ. ಸದಸ್ಯರಾದ ಆನಂದ ಎಂ., ಹೇಮಾವತಿ, ಚಂದ್ರ ಎಂ., ನಫೀಝಾ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಕುಟುಂಬಶ್ರೀ ಜಿಲ್ಲಾ ಮಿಷನ್ ಜಿಲ್ಲಾ ಸಂಚಾಲಕ ಟಿ.ಟಿ.ಸುರೇಂದ್ರನ್ ಮೊದಲಾದವರು ಉಪಸ್ಥಿತರಿದ್ದರು. ಕುಟುಂಬಶ್ರೀ ಸದಸ್ಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.



