ಮಂಜೇಶ್ವರ : ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಸಂಘ ಚಿಗುರುಪಾದೆ ಇದರ 5ನೇ ವಾರ್ಷಿಕೋತ್ಸವದ ಪ್ರಯುಕ್ತ ನಾಲ್ಕು ತಂಡಗಳಿಂದ ಕುಣಿತ ಭಜನೆ ಹಾಗೂ ಸನ್ಮಾನ ಸಮಾರಂಭ ಆ. 11 ರಂದು ಭಾನುವಾರ ಸಂಜೆ 6ರಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ ಕ್ಷೇತ್ರದಲ್ಲಿ ಜರಗಲಿದೆ.
ಭಜನಾ ಸಂಘದ 5ನೇ ವಾರ್ಷಿಕೋತ್ಸವ ನಿಮಿತ್ತ ಜರಗುವ ಸನ್ಮಾನ ಸಮಾರಂಭ ಸಂಜೆ 5.30ಕ್ಕೆ ನಡೆಯಲಿದ್ದು, ನಾಡಿನ ಹಿರಿಯ ಭಜನಾ ಸಂಕೀರ್ತನಾಕಾರ ಪಿ.ಎಲ್.ನಾರಾಯಣ ಅವರನ್ನು ನಾಡಿನ ಗಣ್ಯರ ಸಮಕ್ಷಮ ಸನ್ಮಾನಿಸಲಾಗುವುದು. ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್‍ನ ಅಧ್ಯಕ್ಷೆ ಪ್ರೇಮಾ ಕೆ ಭಟ್ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಲಿದ್ದು, ವಸಂತ ಭಟ್ ತೊಟ್ಟೆತ್ತೋಡಿ, ವೇದಮೂರ್ತಿ ಗಣೇಶ ನಾವಡ ಉಪಸ್ಥಿತರಿರುವರು. ರಾಜಾರಾಮ ರಾವ್ ಚಿಗುರುಪಾದೆ ಸಭಾ ನಿರ್ವಹಣೆ ಗೈಯುವರು. ಬಳಿಕ ನಡೆಯುವ ಭಜನಾ ಕಾರ್ಯಕ್ರಮವನ್ನು ಹಿರಿಯ ಭಜನಾ ಸಂಕೀರ್ತನಕಾರ ಮಾರಪ್ಪ ಭಂಡಾರಿ ಕೌಡೂರು ದೀಪಬೆಳಗಿಸಿ ಉದ್ಘಾಟಿಸುವರು. ಭಜನಾ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಸಂಘ ಚಿಗುರುಪಾದೆ, ಶ್ರೀ ಮಹಾವಿಷ್ಣು ಮೂರ್ತಿ ಕುಣಿತ ಭಜನಾ ಸಂಘ ಹೇರೂರು, ಶ್ರೀ ರಾಜರಾಜೇಶ್ವರ ಕುಣಿತ ಭಜನಾ ಸಂಘ ಬೇಡಗುಡ್ಡೆ, ಶ್ರೀ ಕೃಷ್ಣ ಕುಣಿತ ಭಜನಾ ಸಂಘ ಬಾಡೂರು ಪದವು ತಂಡಗಳು ಭಾಗವಹಿಸಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

