ಬದಿಯಡ್ಕ: ಕೇರಳದ ಕೊಚ್ಚಿಯಲ್ಲಿ ನಡೆದ 'ಬ್ರೈನ್ ಒ ಬ್ರೈನ್' ರಾಜ್ಯಮಟ್ಟದ ಸ್ಪರ್ಧೆಯ 4ನೇ ಹಂತದ ಅಬಕಾಸ್ ನಲ್ಲಿ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜ್ ಪ್ರೌಢ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ ಚಿನ್ಮಯಿ ಕಂಬಾರ್ ಚಿನ್ನದ ಪದಕ ಪಡೆದಿರುತ್ತಾಳೆ.
ಬದಿಯಡ್ಕದ ಪದ್ಮಶ್ರೀ ಟ್ಯುಟೋರಿಯಲ್ ನಲ್ಲಿ ಕಾರ್ಯಾಚರಿಸುತ್ತಿರುವ ಬ್ರೈನ್ ಒ ಬ್ರೈನ್ ಸಂಸ್ಥೆಯಲ್ಲಿ ಅಬಾಕಸ್ ತರಬೇತಿ ಪಡೆಯುತ್ತಿದ್ದು ಉದಯ ಕಂಬಾರ್ ಹಾಗೂ ಮಧುಮತಿ ದಂಪತಿಯ ಪುತ್ರಿ.


