ಮುಳ್ಳೇರಿಯ: ಆದೂರು ಶ್ರೀ ಕಲ್ಲುರ್ಟಿ-ಕಲ್ಕುಡ ದೈವಸ್ಥಾನದಲ್ಲಿ ನಡೆಯುತ್ತಿದ್ದ ದೈವದ ಕೋಲಗಳು ಶನಿವಾರ ವೈಭವದ ನೇಮೋತ್ಸವದೊಂದಿಗೆ ಸಂಪನ್ನಗೊಂಡಿತು.
ಆದೂರು ಕಲ್ಲುರ್ಟಿ -ಕಲ್ಕುಡ ದೈವಸ್ಥಾನದಲ್ಲಿ ನೇಮೋತ್ಸವ ಅಂದರೆ ಸ್ಥಳೀಯರ ಪಾಲಿಗಂತೂ ವಿಶೇಷವಾದ ದಿನ. ಪರವೂರಿನಲ್ಲಿರುವವರೂ ನೇಮೋತ್ಸವದ ದಿನ ಊರಿಗೆ ಬಂದೇ ಬರುತ್ತಾರೆ. ಇದು ಜನರಲ್ಲಿ ದೈವಗಳ ಬಗ್ಗೆ ಅಪಾರವಾದ ಭಕ್ತಿ, ನಂಬಿಕೆಗೆ ಸಾಕ್ಷಿಯಾಗಿದೆ. ಆರಂಭದಲ್ಲಿ ಕಲ್ಕುಡ ದೈವ. ಬಳಿಕ ಕಲ್ಲುರ್ಟಿ ದೈವದ ಕೋಲ ನಡೆಯಿತು.
ಮೂರು ಸಾವಿರ ಭಕ್ತರು:
ನೇಮೋತ್ಸವದಲ್ಲಿ ಸ್ಥಳೀಯರು, ಜಿಲ್ಲೆಯ ವಿವಿಧ ಪ್ರದೇಶದವರು, ವಿಟ್ಲ, ಪುತ್ತೂರು, ಮಡಿಕೇರಿ ಮೊದಲಾದ ಪ್ರದೇಶಗಳ ಸುಮಾರು ಮೂರು ಸಾವಿರ ಮಂದಿ ಇಲ್ಲಿ ಸೇರಿ ದೈವದ ನುಡಿ ಕೇಳಿ ಕೃತಾರ್ಥರಾಗುತ್ತಾರೆ. ಗುತ್ತಿನ ಕುಟುಂಬಸ್ಥರಾದ ಬೊಂಬಾಯಿಯ ನಿವಾಸಿಗಳೂ ಇದರಲ್ಲಿ ಭಾಗವಹಿಸುತ್ತಾರೆ. ಇಲ್ಲಿ ನೆಲÉಗೊಂಡಿರುವ ದೈವಗಳು ಕಾರಣಿಕವುಳ್ಳದ್ದೂ, ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುತ್ತವೆ ಎಂಬ ದೃಢ ನಂಬಿಕೆಯೇ ಜನರನ್ನು ಇತ್ತ ಆಕರ್ಷಿಸುತ್ತಿದೆ.
1003 ಸಮ್ಮಾನಗಳು:
ದೈವಗಳಿಗೆ ಈ ಸಂದರ್ಭದಲ್ಲಿ ಸಲ್ಲಿಸುವ ಪ್ರಧಾನವಾದ ಹರಿಕೆಯೇ ಸಮ್ಮಾನ. ಅಕ್ಕಿ, ಕೋಳಿ. ಕೋಳಿಯ ಪದಾರ್ಥವನ್ನು ಮಾಡಲು ಬÉೀಕಾದ ವಸ್ತುಗಳಾದ ಉಪ್ಪು,ಮೆಣಸು,ಹುಳಿ ಮೊದಲಾದ ಸಾಮಾಗ್ರಿಗಳು ಇದರಲ್ಲಿ ಅಡಕವಾಗಿರುತ್ತವೆ. ಇಂತಹಾ ಸಾವಿರದ ಮೂರು ಸಮ್ಮಾನಗಳು ಈ ವರ್ಷ ಇಲ್ಲಿ ಸಲ್ಲಿಕೆಯಾಗಿದೆ. ಆದೂರು ಗ್ರಾಮ ವಾಸಿಗಳಂತೂ ತಪ್ಪದೆ ಈ ಸಮ್ಮಾನವನ್ನು ಒಪ್ಪಿಸಿಯೇ ಒಪ್ಪಿಸುತ್ತಾರೆ. ಹೊರತಾಗಿ ದೈವಕ್ಕೆ ಪಟ್ಟೆಸೀರೆ, ಬೆಳ್ಳಿ-ಬಂಗಾರದ ಹೂ, ಅವರವರ ಸಂಕಲ್ಪದಂತೆ ದೀಪ, ಆಭರಣ, ಹಣ, ಅಕ್ಕಿಗಳನ್ನು ಹರಿಕೆ ರೂಪದಲ್ಲಿ ಸಲ್ಲಿಸಿದಾರೆ. ಸಮ್ಮಾನ ನೀಡಿದವರಿಗೆ ಪ್ರತ್ಯೇಕವಾಗಿ ನೇಮೋತ್ಸವ ಕೊನೆಗೊಂಡ ಮೇಲÉ ಕಡುಬು(ಪುಂಡಿ) ಹಾಗೂ ಹರಿಕೆಯಾಗಿ ಬಂದ ಕೋಳಿಗಳ ಪದಾರ್ಥವನ್ನು ಇಲ್ಲಿ ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ.
200 ಸ್ವಯಂ ಸೇವಕರುಃ
ನೇಮೋತ್ಸವದ ಪೂರ್ವ ತಯಾರಿಗೆ ಇಲ್ಲಿ ಸ್ವಯಂ ಸೇವಕರ ತಂಡವೇ ಸಜ್ಜಾಗಿರುತ್ತದೆ. ಈ ವರ್ಷ 200 ಮಂದಿ ಇದರಲ್ಲಿ ತೊಡಗಿಸಿಕೊಂಡವರು. ಸಮ್ಮಾನವನ್ನು ಲÉಕ್ಕ ಹಾಕಿದರೆ 1003 ಕಿಲೋ ಅಕ್ಕಿಯ ಕಡುಬು ತಯಾರಿ, 1003 ಕೋಳಿಗಳನ್ನು ಪದಾರ್ಥ ಮಾಡುವ ಕೆಲಸಕ್ಕೆ ಹಿಂದಿನ ದಿನ ರಾತ್ರಿಯಿಡೀ ಸಾಕಷ್ಟು ಶ್ರಮ ವಹಿಸುತ್ತಾರೆ.



