ಕುಂಬಳೆ: ಕುಂಬಳೆ ಫಿರ್ಕಾ ಬಂಟರ ಸಂಘ ಮತ್ತು ಬಂಟರ ಯಾನೆ ನಾಡವರ ಮಾತೃಸಂಘದ ಜಂಟಿ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಮತ್ತು ಆಟಿದ ಕೂಟ ಕಾರ್ಯಕ್ರಮ ಬದಿಯಡ್ಕದ ಸಂಸ್ಕøತಿ ಭವನದಲ್ಲಿ ಇತ್ತೀಚೆಗೆ ಜರಗಿತು.
ಜಿಲ್ಲಾ ಬಂಟರ ಸಂಘದ ಕೋಶಾಧಿಕಾರಿ ಚಂದ್ರಹಾಸ ರೈ ಪೆರಡಾಲಗುತ್ತು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, 0ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಸಂಘದ ವತಿಯಿಂದ ಲಭ್ಯವಾಗುವ ಪ್ರತಿಭಾ ಪುರಸ್ಕಾರ-ವಿದ್ಯಾರ್ಥಿ ವೇತನ ಜೀವನದಲ್ಲಿ ಸಿಗುವ ದೊಡ್ಡಬ ಗೌರವ ಎಮದು ತಿಳಿಸಿದರು. ಇಂತಹ ಪ್ರೋತ್ಸಾಹಗಳನ್ನು ಮರೆಯದೆ ಸಂಘಟನೆಯ ಬಗ್ಗೆ ಪ್ರೀತಿ, ಅಭಿಮಾನವನ್ನು ಎಂದಿಗೂ ಹೊಂದಿರಬೇಕು ಎಂದು ತಿಳಿಸಿದರು.
ಕುಂಬಳೆ ಫಿರ್ಕಾ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ಸಂಘಟನೆಯ ಬೆಳವಣಿಗೆಗೆ ಯುವ ಸಮೂಹದ ಪಾತ್ರ ಮಹತ್ವವಾದದ್ದು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಡಾ.ವಿದ್ಯಾಮೋಹನದಾಸ್ ರೈ ವಿಶೇಷೋಪನ್ಯಾಸ ನೀಡಿದರು.
ಬಂಟರ ಯಾನೆ ನಾಡವರ ಮಾತೃಸಂಘದ ಕಾಸರಗೋಡು ತಾಲೂಕು ಸಮಿತಿ ಸದಸ್ಯೆ ಲತಾ ಬಾಲಕೃಷ್ಣ ರೈ, ಕಾಟುಕುಕ್ಕೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಿ.ಎಸ್.ಗಾಂಭೀರ್, ವಿವಿಧ ಪಂಚಾಯತಿ ಘಟಕಗಳ ಅಧ್ಯಕ್ಷರುಗಳಾದ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಮನಮೋಹನ ರೈ ಪಿಂಡಗ, ರವೀಂದ್ರನಾಥ ಶೆಟ್ಟಿ ವಳಮಲೆ, ಸಂಜೀವ ರೈ ಪುತ್ತಿಗೆ ಉಪಸ್ಥಿತರಿದ್ದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎ ಪ್ಲಸ್ ಅಂಕಗಳಿಸಿದ ಕುಂಬಳೆ ವಲಯದ 6 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಿ ಪ್ಲಸ್ ಮೇಲ್ಪಟ್ಟು ಅಂಕಗಳಿಸಿದ 22 ಮಂದಿ ವಿದ್ಯಾರ್ಥಿಗಳಿಗೆ ಹಾಗೂ ಪ್ಲಸ್ ವನ್ ತರಗತಿಯಲ್ಲಿ ಶೇ.60 ಮೇಲ್ಪಟ್ಟು ಅಂಕಗಳಿಸಿದ 12 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಆಟಿ ತಿಂಗಳ ವಿಶೇಷ ವೈವಿಧ್ಯಮಯ ತಿಂಡಿ ತಿನಸುಗಳ ವ್ಯವಸ್ಥೆ ಮಾಡಲಾಗಿತ್ತು.
ಕುಂಬಳೆ ಫಿರ್ಕಾ ಕಾರ್ಯದರ್ಶಿ ಅಶೋಕ ರೈ ಸ್ವಾಗತಿಸಿ, ಬದಿಯಡ್ಕ ಬಂಟ್ಸ್ ಮಹಿಳಾ ಸಂಘದ ಸದಸ್ಯೆಯರು ಪ್ರಾರ್ಥನೆ ಹಾಡಿದರು. ನಿರಂಜನ ರೈ ಪೆರಡಾಲ, ಹರ್ಷಕುಮಾರ್ ರೈ ಬೆಳಿಂಜ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಆಳ್ವ ಉಜಾರು, ಗೋಪಾಲಕೃಷ್ಣ ಶೆಟ್ಟಿ, ಶ್ಯಾಮ ಆಳ್ವ ಕಡಾರು ಸಹಕರಿಸಿದರು. ಕೋಶಾಧಿಕಾರಿ ಹರಿಪ್ರಸಾದ್ ರೈ ಮಾಯಿಲೆಂಗಿ ವಂದಿಸಿದರು.



