ಕಾಸರಗೋಡು: ನಗರದ ರೈಲು ನಿಲ್ದಾಣ ಪರಿಸರದ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ವ್ರತ ಪರ್ವ ದಿನದಂದು ವಿಶೇಷ ಪೂಜಾದಿಗಳು ನೆರವೇರಿತು.
ಗೌಡ ಸಾರಸ್ವತ ಬ್ರಾಹ್ಮಣ ಮಹಿಳಾ ಸಮಿತಿಯ ವತಿಯಿಂದ ಶ್ರಾವಣ ಮಾಸದ ಸಾಮೂಹಿಕ ಚೂಡಿ ಪೂಜೆ ಸಲ್ಲಿಸಲಾಯಿತು. ಬಳಿಕ ಸಮಾಜದ ಸುಮಂಗಲಿಯರು ಪದ್ಮಾವತಿ ದೇವಿಗೆ ಚೂಡಿ ಸಲ್ಲಿಸಿ ಕುಂಕುಮಾರ್ಚನೆ ಸೇವೆ ನಡೆಸಿ ಕೊಟ್ಟರು. ಶ್ರೀ ವರದರಾಜ ವೆಂಕಟರಮಣ ದೇವರಿಗೆ ಹಾಗೂ ಪದ್ಮಾವತಿ ದೇವಿಗೆ ವಿಶೇಷ ಅಲಂಕಾರದೊಂದಿಗೆ ವೈಭವದ ಪೂಜೆ ನೆರವೇರಿತು.


