ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ವತಿಯಿಂದ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನದ ನಿರ್ಮಾಣ ಯೋಜನೆ ಹಾಗೂ ಯೋಜನೆಯ ಕಾರ್ಯಗತಕ್ಕೆ ಸಂಬಂಧಿಸಿದಂತೆ ಹಾಗೂ ಸೆಪ್ಟಂಬರ್ ತಿಂಗಳ 6 ಮತ್ತು 7ರಂದು ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನದ ಬಗೆಗೆ ಸಮಾಲೋಚನಾ ಸಭೆ ಆರ್.ಕೆ.ಭಟ್ ಬೆಳ್ಳಾರೆ ಅವರ ನೇತೃತ್ವದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಜರಗಿತು.
ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ವಿಭಾಗೀಯ ಪ್ರಬಂಧಕ ನರಸಿಂಹ ಮೂರ್ತಿ, ವೇದೋಡಿ ಸೂರ್ಯನಾರಾಯಣ ಭಟ್, ಸತೀಶ್ ಭಟ್, ನಿರ್ಮಲಾ ಅಮರನಾಥ್, ತ್ರಿವಿಕ್ರಮ ಕೆ.ಆರ್., ದೇವಿಪ್ರಸಾದ್ ನಾಯಕ್, ರಾಜ್ ಸಂಪಾಜೆ, ಕೃಷ್ಣ ಜೋಯಿಸ್, ಅವಿನಾಶ್ ಬೈಪಡಿತ್ತಾಯ, ಪ್ರಸನ್ನ ಕಾರಂತ ಮೊದಲಾದವರು ಉಪಸ್ಥಿತರಿದ್ದರು. ಸಂಯೋಜಕ, ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ, ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಸಭೆಗೆ ಮಾಹಿತಿ ನೀಡಿದರು.


