ಕುಂಬಳೆ: ಸಾಮಾಜಿಕ, ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘÀಟನೆಯಾದ ಯುವ ತೇಜಸ್ ಬೆದ್ರಡ್ಕ ಇದರ ನೂತನ ಕಟ್ಟಡದ ಶಿಲಾನ್ಯಾಸ ಇತ್ತೀಚೆಗೆ ನಡೆಯಿತು.
ಹಿರಿಯ ಶಿಲ್ಪಿ ರಮೇಶ ಕಾರಂತ ಬೆದ್ರಡ್ಕ ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಯುವ ಸಂಘಟನೆಗಳ ಮೂಲಕ ಸಾಮಾಜಿಕ ಬದ್ದತೆಯ ಚಟುವಟಿಕೆಗಳು ನಿತ್ಯ ನಿರಂತರವಾಗಿ ನಡೆಯುತ್ತಿರಲಿ. ಯುವ ಮನಸ್ಸುಗಳ ಒಗ್ಗಟ್ಟಿನ ಸೂಚಕವಾದ ಸಂಘಟನೆಗಳು ತಮ್ಮ ಕ್ರಿಯಾತ್ಮಕ ಚಟುವಟಿಕೆಗಳಿಂದ ವೈಯುಕ್ತಿಕವಾಗಿಯೂ, ಸಾಮಾಜಿಕವಾಗಿಯು ಮಾರ್ಗದರ್ಶಿ ವ್ಯಕ್ತಿತ್ವ ರೂಪಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ಬೆದ್ರಡ್ಕ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರರು ಹಾಗೂ ಶ್ರೀಶಂಕರನಾರಾಯಣ ಕುಟ್ಟಿಚ್ಚಾತ ದೇವಸ್ಥಾನದ ಅರ್ಚಕರು, ಸ್ಥಳೀಯರು ಉಪಸ್ಥಿತರಿದ್ದರು. ಈ ಸಂದರ್ಭ ಕರ್ನಾಟಕ ಉನ್ನತ ಶಿಕ್ಷಣದ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತ ಪ್ರವೀಣ್ ಕುಮಾರ್ ಹಾಗೂ ಗೌತಮ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.



