HEALTH TIPS

ಮಳೆಗಾಲದಲ್ಲಿ ವಿದ್ಯುತ್ ತೊಂದರೆ : ನೂತನ ನಂಬ್ರಕ್ಕೆ ಕರೆಮಾಡಿ

 
      ಕಾಸರಗೋಡು: ಬಿರುಸಿನ ಮಳೆಯ ಪರಿಣಾಮ ವಿದ್ಯುತ್ ಮೊಟಕು ಸಂಭವಿಸಿದಲ್ಲಿ ಸಾರ್ವಜನಿಕರು  ವಿಭಾಗೀಯ ಕಚೇರಿಗಳಿಗೆ ಕರೆಮಾಡಿದಾಗ ಒಂದೊಮ್ಮೆ ಸಿಬ್ಬಂದಿ ದೂರವಾಣಿ ಸಂಪರ್ಕ ನಡೆಸದೇ ಇದ್ದಲ್ಲಿ, 9496010101 ಎಂಬ ನಂಬ್ರಕ್ಕೆ ಕರೆಮಾಡುವಂತೆ ವಿದ್ಯುನ್ಮಂಡಳಿ ಅಧಿಕಾರಿಗಳು ವಿನಂತಿಸಿದ್ದಾರೆ. 
             ಈ ಸಂಬಂಧ ಸಾರ್ವಜನಿಕರು ದೂರುತ್ತಿರುವುದು ಗಮನಕ್ಕೆ ಬಂದಿದೆ.  ಕಳೆದ 2 ದಿನಗಳಿಂದ ಸುರಿಯುತ್ತಿರುವ ಬಿರುಸಿನಮಳೆಗೆ ಜಿಲ್ಲೆಯ ವಿವಿಧೆಡೆ ತಂತಿಕಡಿದು ಬೀಳುವುದು ಸಹಿತ ಅಪಾಯಗಳು ಜಿಲ್ಲೆಯಲ್ಲಿ ಸಂಭವಿಸುತ್ತಿದ್ದು, ಇಲಾಖೆಯ ಎಲ್ಲ ಸಿಬ್ಬಂದಿ ರಕ್ಷಣೆಗಾಗಿ ದಾವಿಸುತ್ತಿದ್ದಾರೆ. ಈ ಸಂದರ್ಭ ಸಾರ್ವಜನಿಕರು ಮಾಡುವ ದೂರವಾಣಿ ಕರೆಗಳನ್ನು ಸ್ವೀಕರಿಸುವ ಅವಕಾಶಗಳು ಇಲ್ಲದೇ ಹೋಗುತ್ತಿದೆ ಎಂದವರು ಸ್ಪಷ್ಟಪಡಿಸಿದರು. 
    ಈಗ ನೀಡಲಾಗಿರುವ ನಂಬ್ರಕ್ಕೆ ಕರೆಮಾಡುವ ವೇಳೆ ತಂತಿ ಕಡಿದುಬಿದ್ದ ವಿಚಾರಕ್ಕೆ ಆದ್ಯತೆ ನೀಡುವಂತೆ, ಸಾಧ್ಯವಾದಲ್ಲಿ ವಿದ್ಯುತ್ ಕಂಭದ ನಂರ(ಪೋಸ್ಟ್ ನಂಬರ್) ಕೂಡ ನೀಡುವಂತೆ, ಈ ಮೂಲಕ ಸಮಯ ನಷ್ಟ ಇಲ್ಲದೇ ಕ್ರಮಕೈಗೊಳ್ಳಬಹುದಾಗಿದೆ ಎಂದು ಅವರು ವಿನಂತಿಸಿದ್ದಾರೆ.
ಈ ಕೆಳಗಿನ ವಿಚಾರಗಳಲ್ಲಿ ವಿದ್ಯುತ್ ಇಲಾಖೆಗೆ ಸಾರ್ವಜನಿಕರ ಸಹಕಾರ ಬೇಕಿದೆ:
1. ವಿದ್ಯುತ್ ಸಂಪರ್ಕ ಕಡಿದ ಮರುಕ್ಷಣದಲ್ಲೇ ಇಲಾಖೆಯ ವಿಭಾಗಯ ಕಚೇರಿಗಳಿಗೆ ಕರೆಮಾಡದಿರಿ. ಇದರಿಂದ ತಂತಿ ಕಡಿದು ಬಿದ್ದಿರುವ ಸಹಿತ ಗಂಭೀರ ಪ್ರಕರಣಗಳಿಗೆ ಸಂಬಂಧಿಸಿ ಮಾಹಿತಿ ನೀಡಲು ಕರೆಮಾಡುವವರಿಗೆ ಸಂಪರ್ಕ ಸಿಗದೇ ಹೋಗುವ ಭೀತಿಯಿದೆ.
2. ದೂರುಗಳನ್ನು 1912 ಎಂಬ ಟಾಲ್ ಫ್ರೋ ನಂಬ್ರದಲ್ಲಿ 13 ಅಂಕಿಯ ಗ್ರಾಹಕ ನಂಬ್ರ ಸಹಿತ ನೋಂದಣಿ ನೆಸಬೇಕು. ಇಲ್ಲದೇಇದ್ದಲ್ಲಿ 9496001912 ಎಂಬ ನಂಬ್ರಕ್ಕೆ 13 ಅಂಕಿ ಗ್ರಾಹಕ ನಂಬ್ರ ಸೇರಿಸಿ ವಾಟ್ಸ್ ಆಫ್ ಮಾಡಿರಿ. ಮಳೆಗಾಲದ ಸಮಸ್ಯೆಗಳನ್ನು ತಿಳಿಸುವ ನಿಟ್ಟಿನಲ್ಲಿ 1912 ಎಂ ಅನಿವಾರ್ಯ  ಸೇವೆ ಘಟಕಕಕ್ಕೆ 20 ಮಂದಿಯನ್ನು ಹೆಚ್ಚುವರಿಯಾಗಿ ನೇಮಕಗೊಳಿಸಲಾಗಿದೆ.
3. ತಂತಿ ಕಡಿದಿರುವುದು/ ಇತರ ಅಪಾಯಗಳು ಸಂಭವಿಸಿದಲ್ಲಿ ತಕ್ಷಣ ಪೋಸ್ಟ್ ನಂಬ್ರ ಸಹಿತ ವಿಭಾಗ ಕಚೇರಿಗೆ ತಿಳಿಸಬೇಕು. 9406010101 ಎಂಬ ಅನಿವಾರ್ಯ ನಂಬ್ರಕ್ಕೆ ಕರೆಮಾಡಬೇಕು.
4. ತಂತಿ ಕಡಿದು ಬಿದ್ದಿರುವುದು ಗಮನಕ್ಕೆ ಬಂದಲ್ಲಿ ಅದರ ಬಳಿಗೆ ಹೋಗಕೂಡದು. ಉಳಿದವರೂ ಅತ್ತ ಸುಳಿಯದಂತೆ ಗಮನಿಸಬೇಕು.
5.ಹಗಲು ವಿದ್ಯುತ್ ಮೊಟಕು ಸಂಭವಿಸಿದಲ್ಲಿ ರಾತ್ರಯಾಗುವ ವರೆಗೆ ಕಾದು ನಂತರ ದೂರು ಸಲ್ಲಿಸದೆ, 1912 ನಂಬ್ರಕ್ಕೆ ದೂರು ಸಲ್ಲಿಸಬಹುದು. ರಾತ್ರಿ ಕಂಭವೇರಿ ದುರಸ್ತಿ ಕಾಯಕ ನಡೆಸುವುದು ಕಷ್ಟಸಾಧ್ಯವಾಗಿರುತ್ತದೆ.
           ಅಪಾಯಕರ ಸನ್ನಿವೇಶಗಳಲ್ಲಿ ನಿಯಂತ್ರಣ ಕೊಠಡಿಗೆ ಕರೆಮಾಡಿ
    ಬಿರುಸಿನ ಮಳೆಯ ಪರಿಣಾಮ ಎಲ್ಲೆಡೆ ತಲೆದೋರಿರುವ ಭೀಕರ ನೆರೆಹಾವಳಿಯಿಂದ ನಡೆಯುತ್ತಿರುವಪಾಯಕರ ಸನ್ನಿವೇಶಗಳಲ್ಲಿ ಏಕೀಕೃತ ರಕ್ಷಣೆ ಚಟುವಟಿಕೆ ನಡೆಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮೀನುಗಾರಕೆ ಇಲಾಖೆಯ ನಿಯಂತ್ರಣ ಕೊಠಡಿಗಳು ವಿಶೇಷ ತಂಡದ ಚಟುವಟಿಕೆಗಳನ್ನು ರಂಭಿಸಿವೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ನಿಯಂತ್ರಣ ಕೊಠಡಿ ಮತ್ತು ಹೊಣೆಗಾರಿಕೆ ಇರುವ ಅಧಿಕಾರಯ ದೂರವಾಣಿ ಸಂಖ್ಯೆ: 0467-2202537, 9496007034. ತುರ್ತು ಸಂದರ್ಭಗಳಲ್ಲಿ ಈ ನಂಬ್ರಗಳಿಗೆಕರೆ ಮಾಡಿ ಸಹಾಯ ಯಾಚಿಸಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries