HEALTH TIPS

ಕಡಲ್ಕೊರೆತ ತೀವ್ರ-ಬಿರುಸಿನ ಮಳೆ- ಕೆ.ಎಸ್.ಇ.ಬಿ.: ನಿಯಂತ್ರಣ ಕೊಠಡಿ ಆರಂಭ


    ಕಾಸರಗೋಡು:   ಕೆ.ಎಸ್.ಇ.ಬಿ.ಕಾಸರಗೋಡು ಸರ್ಕಲ್ ವ್ಯಾಪ್ತಿಯಲ್ಲಿ ಮಳೆಗಾಲದ ದುರಂತ ಸಂಭವಿಸಿದ ಸಂದರ್ಭದಲ್ಲಿ ಸಹಾಯ ಒದಗಿಸುವ ನಿಟ್ಟಿನಲ್ಲಿ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ.
         ವಿದ್ಯುತ್ ತಂತಿ ಕಡಿದು ಬಿದ್ದಾಗ, ವಿದ್ಯುತ್ ತಂತಿಗೆ ಸಂಬಂಧಿಸಿ ಯಾವುದೇ ಅಪಾಯ ಸಂಭವಿಸಿದಾಗ ಗ್ರಾಹಕರು ನಿಯಂತ್ರಣ ಕೊಠಡಿಗೆ ದೂರವಾಣಿ ಸಂಖ್ಯೆ 9496011431 ಗೆ ಕರೆಮಾಡಬಹುದು. ಸಾಧಾರಣ ಗತಿಯಲ್ಲಿ ನಡೆಯುವ ವಿದ್ಯುತ್ ಮೊಟಕು ವಿಚಾರಗಳಿಗೆ ಈ ಸಂಖ್ಯೆಗೆ ಕರೆಮಾಡಬಾರದು. ಇದಕ್ಕಾಗಿ ಟಾಲ್ ಫ್ರೀ ನಂಬ್ರ 1921 ಕ್ಕೆ ಕರೆಮಾಡಿ ದೂರು ನೋಂದಣಿ ನಡೆಸಬೇಕು ಎಂದು ಕಾಸರಗೋಡು ಇಲಕೆಕ್ರಿಕಲ್ಸರ್ಕಲ್ಡೆಪ್ಯೂಟಿ ಚೀಫ್ ಇಂಜಿನಿಯರ್ ತಿಳಿಸಿದರು.
ಸೆಕ್ಷನ್ ಆಫೀಸ್ ನಂಬ್ರಗಳು:  ಕಾಸರಗೋಡು-04994-230739,9496011502, ನೆಲ್ಲಿಕುಂಜೆ-04994-230393,9496011508, ಕುಂಬಳೆ-04998-213016,9496011504, ಉಪ್ಪಳ-04998-240693,9496011526, ಮಂಜೇಶ್ವರ-04998-272400,9496011521, ವರ್ಕಾಡಿ-04998-202900,949611530, ಪೈವಳಿಕೆ-04998-207700,9496012149, ಚೆರ್ಕಳ-04994-280239,9496011491, ಬದಿಯಡ್ಕ-04998-284051,9496011486, ಪೆರ್ಲ-04994-225622,9496011495, ಉದುಮಾ-04997-236243, 9496012282, ಕುತ್ತಿಕೋಲ್-04994-205176, 9496011517, ಸೀತಾಂಗೋಳಿ-04998-246016, 9496018763, ಕಾ?ಂಗಾಡ್-04672-204149,9496011442, ಚಿತ್ತಾರಿ-04672-267049,9496011437, ಪಡನ್ನಕ್ಕಾಡ್-04672-284149, 9496018356, ಪೆರಿಯ ಬಝಾರ್-04672-234750,9496012224, ರಾಜಪುರಂ-04672-224049,9496011452, ಬಳಾಂತೋಡ್-04672-228249,949612229, ನೀಲೇಶ್ವರ-04672-280260,9496011463, ಚೊಯ್ಯಂಗೋಡ್-04672-259260,9496011575, ಭೀಮನಡಿ-04672-241389,9496011457, ನಲ್ಲೊಂಬುಳ-04672-221100,9496011457, ಪಿಲಿಕೋಡ್-04672-260687,9496011476, ತ್ರಿಕರಿಪುರ-04672-210292,9496011481, ಕಯ್ಯೂರ್-04672-230220,9496011467, ಪಡನ್ನ-04672-277786,9496011472.
              ಜಿಲ್ಲೆಯಲ್ಲಿ ಬಿರುಸಿನ ಮಳೆ, ವ್ಯಾಪಕ ಹಾನಿ : ರೆಡ್ ಅಲೆರ್ಟ್ ಘೋಷಣೆ
         ಕಾಸರಗೋಡು ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿಯುತ್ತಿದೆ. ರಾಜ್ಯ ದುರಂತ ನಿವಾರಣೆ ಪ್ರಾಧಿಕಾರ ರೆಡ್ ಅಲೆರ್ಟ್ ಘೋಷಿಸಿದೆ. ಜಿಲ್ಲೆಯಲ್ಲಿ ಉಪ್ಪಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಪರಪ್ಪ ಕ್ಲಾಯಿಕೋಡ್ ಫಾಂ ಹೌಸ್, ಉಡುಂಬುಂತಲ 48ನೇ ನಂಬ್ರ ಅಂಗನವಾಡಿಗಳನ್ನು ಪುನರ್ವಸತಿ ಕೇಂದ್ರಗಳಾನ್ನಾಗಿಸಲಾಗಿದೆ.             
       ಮಂಜೇಶ್ವರ ತಾಲೂಕಿನ ಮುಸೋಡಿಯಲ್ಲಿ ಕಡಲ್ಕೊರೆತ ತೀವ್ರವಾಗಿದ್ದು, 9 ಕುಟುಂಬಗಳನ್ನು ಸುರಕ್ಷಿತ ತಾಣಕ್ಕೆ(ಉಪ್ಪಳ ಶಾಲೆ) ಸ್ಥಳಾಂತರಿಸಲಾಗಿದೆ. ಕುಂಬಳೆಯಲ್ಲಿ 2 ಕುಟುಂಬಗಳನ್ನು, ಚೇರಂಗಾಯಿ ಕರಾವಳಿಯ 2 ಕುಟುಂಬಗಳನ್ನು ಸಂಬಮಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ತೇಜಸ್ವಿನಿ ನದಿ ಉಕ್ಕಿ ಹರಿದು ಪಾಲಾಯಿ, ಚಾತಮತ್, ಅಚ್ಚಾಂತುರ್ತಿ, ಪೋಟೋತುರ್ತಿ, ಆಲಾಯಿ ಪ್ರದೇಶಗಳಲ್ಲಿನೆರೆಹಾವಳಿ ತಲೆದೋರಿದೆ. ಅನೇಕ ಮನೆಗಳು ಜಲಾವೃತಗೊಂಡು, ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ.
      ಸೌತ್ ತ್ರಿಕರಿಪುರ ಗ್ರಾಮದ ನದಿತಟದಲ್ಲಿ ತಾತ್ಕಾಲಿಕ ಶೆಡ್ ನಲ್ಲಿ ವಾಸಿಸುತ್ತಿದ್ದ ಕುಟುಂಬಗಳನ್ನು ಉಡುಂಬುಂತಲ ಅಂಗನವಾಡಿಗೆ ಸ್ಥಳಾಂತರಿಸಲಾಗಿದೆ. ಪಾಲಾವಯಲ್ ಗ್ರಾಮದಲ್ಲಿ ಮನೆ ಕುಸಿದಿದೆ. ಈಸ್ಟ್ ಏಳೇರಿ,ಬಳಾಲ್ ಕೋಡೋಂಬೇಲೂರು ,ವೆಸ್ಟ್ ಏಳೇರಿ ಪ್ರದೆಶಗಳಲ್ಲಿ ಗುಡ್ಡದಿಂದ ಮಣ್ಣು ಕುಸಿದಿದೆ. ಇಲ್ಲಿನ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಗೊಳ್ಳುವಂತೆ ತಿಳಿಸಲಾಗಿದೆ.
          ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಸಹಾಯಕ ಜಿಲ್ಲಧಿಕಾರಿಗಳು, ನಗರಸಭೆ ಅಧ್ಯಕ್ಷರು, ತ್ರಿಸ್ತರ ಪಂಚಾಯತ್ ಅಧ್ಯಕ್ಷರು ಮೊದಲಾದವರ ಸಹಕಾರದೊಂದಿಗೆ ರಕ್ಷಣೆ ಚಟುವಟಿಕೆಗಳು ನಡೆಯುತ್ತಿವೆ. ಕಂದಾಯ ಪೊಲೀಸ್, ಅಗ್ನಿಶಾಮಕದಳ ಸಹಿತ ಇಲಾಖೆಗಳು, ಸ್ಥಳೀಯಾಡಳಿತ ಸಂಸ್ಥೆಗಳು ಜಂಟಿಯಾಗಿ ರಂಗದಲ್ಲಿವೆ. ಅಪಾಯ ನಡೆಯುತ್ತಿರುವ ಪ್ರದೇಶಗಳಲ್ಲಿ ವಿಶೇಷ ತರಬೇತಿ ಪಡೆದಿರುವ ಮೀನುಗಾರರನ್ನು ಸಜ್ಜುಗೊಳಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries