ಕಾಸರಗೋಡು: ಬಿರುಸಿನ ಗಾಳಿಮಳೆಯ ಅವಧಿಯಲ್ಲಿ ವಿದ್ಯುತ್ ಅಪಾಯಗಳು ಸಂಭವಿಸದಂತೆ ಇಲಾಖೆ ಸಿಬ್ಬಂದಿ ಮತ್ತು ಸಾರ್ವಜನಿಕರು ಮುಂಜಾಗರೂಕತೆ ವಹಿಸುವಂತೆ ಕೆ.ಎಸ್.ಇ.ಬಿ. ತಿಳಿಸಿದೆ.
ಜಾಗರೂಕತೆಯ ಆದೇಶಗಳು :
1. ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದು ಕಂಡಲ್ಲಿ ತಕ್ಷಣ ಫ್ಯೂಸ್ ತೆರವುಗೊಳಿಸುವ ಇತ್ಯಾದಿ ಕಾರಣಗಳಿಂದ ಸ್ಪರ್ಶಿಸಬಾರದು. ಜನರೇಟರ್, ಇನ್ವೆರ್ಟರ್ ಮೂಲಕ ವಿದ್ಯುತ್ ಪ್ರವಹಿಸುವ ಸಾಧ್ಯತೆಗಳಿರುತ್ತವೆ. ಆದಕಾರಣ ಲೈನ್ ಅರ್ತ್ ರೋಡ್ ಬಳಸಿ ಡಿಸ್ಚಾರ್ಜ್ ನಡೆಸಿದ ನಂತರವಷ್ಟೇ ಸ್ಪರ್ಶಿಸಬೇಕು.
2. ವಿದ್ಯುತ್ ತಂತಿಗಳು ತುಂಡಾಗಿ ಬಿದ್ದರೆ ಎರಡೂ ಬದಿಯ ಕಂಭಗಳನ್ನೂ ಏರುವ ಮುನ್ನ ಮರದಗೆಲ್ಲುಗಳು ಬಿದ್ದು ತಂತಿ ತುಂಡಾಗಿದ್ದಲ್ಲಿ ಸಮೀಪದ ಕಂಭದಲ್ಲಿ ವಿದ್ಯುದಾಘಾತದ ಗುರುತುಗಳಿರಬಹುದು. ಅಥವಾ ಇರದಿರಬಹುದು. ಮಣ್ಣಿನಡಿ ಆಘಾತವಾಗಿರಬಹುದು. ಇಂಥಾ ಕಂಭವನ್ನೇರುವ ಮುನ್ನ ಸೂಕ್ತ ಮುಂಜಾಗರೂಕತೆ ಮಾಡಿಕೊಳ್ಳಬೇಕು.
3. ಮಳೆಗಾಲದಲ್ಲಿ ವಿದ್ಯುತ್ ಕಂಭಗಳನ್ನೇರುವಾಗ ಜಾರುವ ಸಾಧ್ಯತೆಗಳಿದ್ದು, ಇದರಿಂದ ಆಯತಪ್ಪಿ ಕೆಳಕ್ಕೆ ಬೀಳುವ ಅಪಾಯಗಳಿರುತ್ತವೆ. ಏಣಿಯಿರಿಸಿ ಏರುವುದಿದ್ದರೂ ಜಾರುವ ಅಪಾಯಗಳಿವೆ. ಈ ಬಗ್ಗೆ ಗಮನವಿರಬೇಕು.
4. ಗುರುಗು-ಸಿಡಿಲು ಇರುವ ವೇಳೆ ವಿದ್ಯುತ್ ಸಂಬಂಧ ಕಾಯಕ ನಡೆಸಕೂಡದು. ಅಲ್ಲಿಂದ ಸುರಕ್ಷಿತ ತಾಣಕ್ಕೆ ತೆರಳುವ ಬಗ್ಗೆ ಗಮನಹರಿಸಬೇಕು.
5. ವಿದ್ಯುತ್ ಅಪಾಯಗಳು ಕಂಡುಬಂದಲ್ಲಿ ಸಮೀಪದ ಇಲಾಖೆ ಕಚೇರಿಗೆ ಯಾ ಸುರಕ್ಷಾ ಏಜೆನ್ಸಿ ನಂಬ್ರ 9496061061 ಕ್ಕೆ ಕರೆಮಾಡಬೇಕು.
ಸಾರ್ವಜನಿಕರು ಪಾಲಿಸಬೇಕಾದ ಜಾಗರೂಕತೆ :
1.ವಿದ್ಯುತ್ತಂತಿ/ಸರ್ವೀಸ್ ತಂತಿ ಕಡಿದು ಬಿದ್ದಲ್ಲಿ ಯಾವ ಕಾರಣಕ್ಕೂ ಸ್ಪರ್ಶಿಸಕೂಡದು. ತಕ್ಷಣ ಕೆ.ಎಸ್.ಇ.ಬಿ. ಕಚೇರಿಗೆ ಮಾಹಿತಿ ನೀಡಬೇಕು.
2.ಬಿರುಸಿನ ಗಾಳಿ-ಮಳೆ, ಗುಡುಗು-ಸಿಡಿಲು ತಲೆದೋರುವವೇಳೆ ಟಿ.ವಿ.,ಕಂಪ್ಯೂಟರ್,ಫ್ರಿಜ್, ವಾಷಿಂಗ್ ಮಿಷನ್ ಸಹಿತ ವಿದ್ಯುನ್ಮಾನ ಸಾಮಾಗ್ರಿಗಳನ್ನು ಬಳಸಕೂಡದು. ಪ್ಲಗ್ ಗೆ ಸಂಪರ್ಕಿಸಿದ ಎಲ್ಲ ಉಪಕರಣಗಳನ್ನೂ ಈ ವೇಳೆ ತೆರವುಗೊಳಿಸಬೇಕು.
3. ವಿದ್ಯುತ್ ಕಂಭಗಳಿಗೆ ಸಾಕುಪ್ರಾಣಿಗಳನ್ನು ಕಟ್ಟಕೂಡದು.
4. ವಿದ್ಯುತ್ ತಂತಿ, ಕಂಭಗಳಿಗೆ ಅಪಾಯವಾಗುವ ಸ್ಥಿತಿಯಲ್ಲಿರುವ ಮರಗಳ , ಗೆಲ್ಲುಗಳ ಬಗ್ಗೆ ಕೆ.ಎಸ್.ಇ.ಬಿ. ಕಚೇರಿಗೆ, ಸುರಕ್ಷಾ ಏಜೆನ್ಸಿ ನಂಬ್ರ 9496061061 ಕ್ಕೆ ಕರೆಮಾಡಬೇಕು.
5. ತಂತಿಗೆ ಯಾ ಕಮಭಕ್ಕೆ ಅಪಾಯ ಸೂಚಿಸುವ ಮರ ಯಾ ಗೆಲ್ಲುಗಳ ತೆರವು ಕಾರ್ಯಕ್ಕೆ ಸಿಬ್ಬಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು.
6. ವಿದ್ಯುತ್ ತಂತಿಗೆ ತಾಗುವಂತೆ ಇರುವ ಮರಗಳನ್ನು ಯಾ ಗೆಲ್ಲುಗಳನ್ನು ಕಡಿಯುವ ವೇಳೆ ವಿದ್ಯುತ್ ಸಂಪರ್ಕ ಕಡಿಯುವ ಮತ್ತು ಮರಳಿ ಸ್ಥಾಪಿಸುವ ನಿಟ್ಟಿನಲ್ಲಿ ಇಲಾಖೆ ಸಿಬ್ಬಂದಿ ಸಹಾಯ ಒದಗಿಸಬೇಕು.
ಏಕೋಪನ ಹೊಣೆ 4 ಮಂದಿ ಸಹಾಯಕ ಜಿಲ್ಲಾಧಿಕಾರಿಗಳಿಗೆ
ಜಿಲ್ಲೆಯಲ್ಲಿ ರೆಡ್ ಅಲೆರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ತಾಲೂಕು ಮಟ್ಟದಲ್ಲಿ ದುರಂತ ನಿವಾರಣೆ ಏಕೋಪನ ಹೊಣೆಯನ್ನು 4 ಮಂದಿ ಸಹಾಯಕ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಮಂಜೇಶ್ವರ ತಾಲೂಕಿನಲ್ಲಿ ಸಹಾಯಕಜಿಲ್ಲಾಧಿಕಾರಿ (ಆರ್.ಆರ್.) ಪಿ.ಆರ್.ರಾಧಿಕಾ(8547616041),
ಕಾಸರಗೋಡು ತಾಲೂಕಿನಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್(944726900), ಹೊಸದುರ್ಗ ತಾಲೂಕಿನಲ್ಲಿ ಸಹಾಯಕ ಜಿಲ್ಲಾಧಿಕಾರಿ(ಚುನಾವಣೆ) ಎ.ಕೆ.ರಮೇಂದ್ರನ್(8547616042), ವೆಳ್ಳರಿಕುಂಡ್ ತಾಲೂಕಿನಲ್ಲಿ ಸಹಾಯಕ ಜಿಲ್ಲಾಧಿಕಾರಿ (ಎಲ್.ಆರ್) ಕೆ.ರವಿಕುಮಾರ್(8547616043) ಅವರಿಗೆ ಹೊಣೆಗಾರಿಕೆ ನೀಡಲಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಈ ತಾಲೂಕುಗಳಲ್ಲಿ ಸಹಾಯಕ ಜಿಲ್ಲಾಧಿಕಾರಿಗಳು ಚಟುವಟಿಕೆಗಳಿಗೆ ನೇತೃತ್ವ ವಹಿಸುವರು.


