ಕುಂಬಳೆ: ಮುಜುಂಗಾವಿನ ಶ್ರೀಭಾರತೀವಿದ್ಯಾಪೀಠದಲ್ಲಿ ಸ್ವಾತಂತ್ರ್ಯದಿನಾಚರಣೆ, ರಕ್ಷಾಬಂಧನ, ಕಾರ್ಯಕ್ರಮಗಳನ್ನು ಜೊತೆಯಲ್ಲೇ ಹಮ್ಮಿಕೊಳ್ಳಲಾಯ್ತು. ಮೊದಲಿಗೆ ಶಾಲಾ ಬಯಲಲ್ಲಿ ಸಾಮೂಹಿಕವಾಗಿ ಧ್ವಜವಂದನೆ ಆಚರಿಸಿ ಆ ಬಳಿಕ ಸಭಾಂಗಣದಲ್ಲಿ ಸಭಾಕಾರ್ಯಕ್ರಮ ನಡೆಯಿತು. ಮಕ್ಕಳಿಂದ ದೇಶಭಕ್ತಿಗೀತೆ, ಸಮೂಹಗಾನ, ಭಾಷಣ ಮೊದಲಾದ ಚಟುವಟಿಕೆಗಳು ನಡೆದುವು. ರಕ್ಷಾಬಂಧನ ಕಾರ್ಯಕ್ರಮದಲ್ಲಿ ವೇದಿಕೆ ಹಾಗೂ ಸಭೆಯಲ್ಲಿ ಪರಸ್ಪರ ರಾಕಿ ಕಟ್ಟುವಮೂಲಕÀ ಸೋದರತ್ವವನ್ನು ಬಿಂಬಿಸಿದರು.
ವೇದಿಕೆಯಲ್ಲಿ ಶಾಲಾ ಆಡಳಿತಮಂಡಳಿ ಅಧ್ಯಕ್ಷ ಎಸ್.ಎನ್.ರಾವ್ ಮುನ್ನಿಪ್ಪಾಡಿ ಅವರು ಅಧ್ಯಕ್ಷತೆ ವಹಿಸಿ ಈ ಸಂದರ್ಭ ಮಾತನಾಡಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಒಮ್ಮತದಿಂದ ಹೋರಾಡಿ ಸ್ವಾತಂತ್ರ್ಯ ದೊರಕಿಸಿಕೊಟ್ಟಂತೆ ಮುಂದೆ ಅದನ್ನು ಕಾಪಾಡಲೂ ಸಮುಷ್ಟಿಯೇ ನಮ್ಮ ಜೀವಾಳ. ಈ ನಿಟ್ಟಿನಲ್ಲಿ ಸೋದರತ್ವದ ಸಂಕೇತವಾದ ರಕ್ಷಾಬಂಧನವೂ ಏಕತೆಯನ್ನೇ ಬಿಂಬಿಸುತ್ತದೆ ಎಂದರು.
ಶಾಲಾ ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ ಮಾತನಾಡಿ ಶುಭ ಹಾರೈಸಿದರು. ಲಡ್ಡು, ಪೇಡಾ ವಿತರಿಸಲಾಯಿತು. 10ನೇ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಶಿಕ್ಷಕ ಹರಿಪ್ರಸಾದ್ ಸ್ವಾಗತಿಸಿ, ಶಿಕ್ಷಕ ದೇವಿಪ್ರಸಾದ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.


