HEALTH TIPS

ಬೇಡಡ್ಕದಲ್ಲಿ ವಿಶ್ವ ಜಾನಪದ ದಿನಾಚರಣೆ-ಪರಂಪರೆಯ ಪುನರವಲೋಕನ ವಿಶ್ವ ಜಾನಪದ ದಿನಾಚರಣೆಯ ಲಕ್ಷ್ಯವಾಗಲಿ-ಸಿ.ರಾಮಚಂದ್ರನ್

 
       ಬದಿಯಡ್ಕ: ಜಾನಪದೀಯ ಸಂಸ್ಕøತಿ ಆಚರಣೆಗಳು ಮಾನವ ಸಂಸ್ಕøತಿಯನ್ನು ಶ್ರೀಮಂತಗೊಳಿಸಿ ಸುಧೀರ್ಘ ಕಾಲದಿಂದ ಜಗತ್ತನ್ನು ವಿವಿಧ ಆಯಾಮಗಳಲ್ಲಿ ಪುನರುಜ್ಜೀವನಗೊಳಿಸಿದೆ. ಬಹು ಸಂಸ್ಕøತಿಯ ಭಾರತೀಯತೆಯ ದ್ಯೋತಕವಾಗಿ ಜನಪದ ಸಂಸ್ಕøತಿಯು  ಅಶಿಕ್ಷಿತ ಜನಸಮುದಾಯ ತಮ್ಮ ಬದುಕಿನ ಕ್ರಿಯೆ ಮತ್ತು ಲಯಗಳೊಂದಿಗೆ ಜೈವಿಕ ಸಂಬಂಧ ಹೊಂದಿರುವ ಶ್ರಾವ್ಯ, ದೃಶ್ಯ, ಸಾಹಿತ್ಯ, ಕಲೆ, ಪರಿಕರಗಳನ್ನು ವೈದ್ಯಕೀಯ ಹಾಗೂ ಕ್ರೀಡೆಯನ್ನು ಬಾಯಿಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ದಾಟಿಸಿ ಒಂದು ಮಾನವ ಸಮಾಜವನ್ನು ಸುದೃಢಗೊಳಿಸಲು ಪ್ರಧಾನ ಭೂಮಿಕೆಯಾಯಿತು ಎಂದು ಬೇಡಡ್ಕ ಗ್ರಾ.ಪಂ.ಅಧ್ಯಕ್ಷ ಸಿ.ರಾಮಚಂದ್ರನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
     ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ಗುರುವಾರ ಬೇಡಡ್ಕ ಜಯನಗರ ಸಮುದಾಯ ಭವನದಲ್ಲಿ ಆಯೋಜಿಸಲಾದ ವಿಶ್ವ ಜಾನಪದ ದಿನಾಚರಣೆ-2019 ಸಮಾರಂಭವನ್ನು ದುಡಿ ವಾದ್ಯ ನುಡಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
      ಗಡಿನಾಡು ಕಾಸರಗೋಡು ಬಹುಭಾಷಾ ಸಾಮರಸ್ಯ ಭೂಮಿಯಾಗಿ ರಾಷ್ಟ್ರದ ಭೂಪಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿಯ ತುಳು, ಕನ್ನಡ, ಮಲೆಯಾಳ ಸಹಿತ ಬಹುಭಾಷಾ ಜಾನಪದ ಸಂಸ್ಕøತಿ ಅತ್ಯಪೂರ್ವವಾದುದುದಾಗಿದ್ದು, ಆಧುನಿಕ ನಾಗಾಲೋಟದಲ್ಲಿ ಮೂಲ ಪರಂಪರೆಯನ್ನು ಪ್ರತಿಬಿಂಬಿಸುವ ಜಾನಪದ ಸಂಸ್ಕøತಿಯನ್ನು ಪುನರವಲೋಕನ ನಡೆಸಲು ಇಂತಹ ಆಚರಣೆಗಳು ಸ್ತುತ್ಯರ್ಹವಾದುದು ಎಂದು ಅವರು ತಿಳಿಸಿದರು. ಬೇಡಗಂ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿಸ್ಕøತವಾಗಿ ಹರಡಿರುವ ಮಂಗಳಂ ಕಳಿ ಎಂಬ ಜಾನಪದ ಪ್ರಾರ್ಥನಾ ಕಲೆಯ ಬೆಳವಣಿಗೆಗೆ ಗ್ರಾ.ಪಂ.ಮೂಲಕ ಪ್ರತ್ಯೇಕ ಅಕಾಡೆಮಿ ನಿರ್ಮಿಸಿ ತರಬೇತಿ, ಮಾರ್ಗದರ್ಶನದಂತಹ ವ್ಯವಸ್ಥೆಯೊಂದು ನಡೆಯುತ್ತಿರುವುದಾಗಿ ಅವರು ಮಾಹಿತಿ ನೀಡಿದರು.
     ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಜಾನಪದ ಸಂಸ್ಕøತಿ-ನಾಗರೀಕತೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಬ್ಯಾಂಕ್ ಅಧಿಕಾರಿ, ಯಕ್ಷ ದ್ರುವ ಪಟ್ಲ ಪೌಂಡೇಶನ್ ಕುಂಬಳೆ ಘಟಕದ ಅಧ್ಯಕ್ಷ ಎಸ್.ಜಗನ್ನಾಥ ಶೆಟ್ಟಿ ಕುಂಬಳೆ ಅವರು ಮಾತನಾಡಿ, ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತ ಮತಿಗಳೆನಿಸಿದ್ದ ನಮ್ಮ ಪೂರ್ವಜರ ನಾಗರಿಕ ಪರಂಪರೆ ಸಮಗ್ರ ಮಾನವ ಸಂಸ್ಕøತಿಯ ಬೆಳವಣಿಗೆಯ ಪ್ರತೀಕವಾಗಿದೆ. ವೈಯುಕ್ತಿಕ ಲಾಭದ ಹಪಹಪಿ ಇಲ್ಲದೆ  ಕಾಲದೊಂದಿಗೆ ಸಂಧಿಸುತ್ತ ರಸ-ಕಸಗಳೆರಡೂ ಸೇರಿ ಚರ ಪಾಠವಾಗಿ ಬೆಳೆದುದು ಜಾನಪದೀಯತೆಯ ಹೆಮ್ಮೆಯಾಗಿದೆ ಎಂದು ತಿಳಿಸಿದರು. ಜಾನಪದವು ಈಗ ಅಧ್ಯಯನ ಶಿಸ್ತಾಗಿ ಬೆಳೆದಿದೆ.ಕಾಲಧರ್ಮಕ್ಕನುಸರಿಸಿ ಪರಂಪರೆಯಿಂದ ಭಿನ್ನಗೊಳ್ಳುವ ಭೀತಿಯೂ ಕಂಡುಬರುತ್ತಿದೆ. ಆದರೆ ಗ್ರಾಮೀಣ ಮಟ್ಟದಲ್ಲಿ ತನ್ನತನವನ್ನು ಉಳಿಸಲು ಹೆಣಗುತ್ತಿರುವ ಪರಂಪರೆಯ ಜಾನಪದವನ್ನು ಪರಿಪೋಶಿಸುವಲ್ಲಿ ಹಿರಿಯರು ನವ ತರುಣರಿಗೆ ಮಾರ್ಗದರ್ಶಕರಾಗಬೇಕು ಎಂದು ಕರೆನೀಡಿದರು.
     ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಗಡಿನಾಡ ಘಟಕದ ಮೂಲಕ ಮಣ್ಣಿನ ಪರಂಪರೆಯನ್ನು ಸಂರಕ್ಷಿಸುವ, ಹೊಸ ಮುಖಗಳಿಗೆ ಪರಿಚಯಿಸುವ ನಿರಂತರ ಕಾರ್ಯಚಟುವಟಿಕೆಗಳು ಆಗುತ್ತಿದೆ ಎಂದು ತಿಳಿಸಿದರು. ಮಾನವನು ತಾನು ಮಾಡುವ ಕೆಲಸಗಳನ್ನೆಲ್ಲ ತನ್ಮಯತೆಯನ್ನು ತುಂಬಲು ಮಾಡಿದ ಪ್ರಯತ್ನಗಳ ಸಂಕೋಲೆಯಾಗಿರುವ ಜಾನಪದ ಸಂಸ್ಕøತಿ ಅವಿನಾಶಿಯಾಗಿ ಮಾನವ ಕುಲಕೋಟಿಯನ್ನು ನವೋತ್ಸಾಹದೆಡೆಗೆ ಪ್ರೋತ್ಸಾಹಿಸುವುದು ಎಂದು ತಿಳಿಸಿದರು.
    ಯಕ್ಷಗಾನ ಗುರು ಪಡುಮಲೆ ಜಯರಾಮ ಪಾಟಾಳಿ, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಕರುಣಾಕರನ್ ಮೊಳತ್ತುಂಗಲ್, ಜಾನಪದ ಕಲಾವಿದೆ, ಘಟಕದ ಸದಸ್ಯೆ ಸರಿತಾ ಶಿವನ್ ಮಲ್ಲ, ಕೃಷ್ಣನ್, ಮೋಹನನ್,ಹಿರಿಯ ಜಾನಪದ ಕಲಾವಿದ ಚನಿಯ, ಪರಿಶಿಷ್ಟ ವಿಭಾಗದ ಬೇಡಡ್ಕ ಗ್ರಾ.ಪಂ. ವಿಸ್ತರಣಾಧಿಕಾರಿ ಎಂ.ಶಾಂತಾ ಉಪಸ್ಥಿತರಿದ್ದು ಮಾತನಾಡಿದರು.
    ಈ ಸಂದರ್ಭ ಬೇಡಡ್ಕ ಜಯನಗರದ ಮಂಗಳಂ ಕಳಿ ತಂಡದ ಸದಸ್ಯರಾದ ಜಯಶ್ರೀ, ಚೋಮು, ಜಾನಕಿ, ಮಾಣಿಕ್ಯಂ, ಸಿಂಧೂ, ಸರೋಜಿನಿ, ಕಮಲ, ಸರೋಜಿನಿ ರಾಘವನ್, ಚನಿಯ, ಮಾಧವಿ, ಮೋಹನ, ಸನೋಜ್ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಹಿರಿಯ ಜಾನಪದ ಕಲಾವಿದ ಚನಿಯ ಅವರ ನೇತೃತ್ವದ ತಂಡದಿಂದ ಮಂಗಳಂ ಕಳಿ ಗಾಯನ ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಜೊತೆ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಟ್ ಕೆ.ವಂದಿಸಿದರು. ಗೌರವ ಸಲಹೆಗಾರ ಪ್ರೊ.ಎ.ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries