HEALTH TIPS

ಪಾಕ್ ದಾಳಿ ಯತ್ನ ವಿಫಲಗೊಳಿಸಿ ಇಬ್ಬರು ಪಾಕ್ ಕಮಾಂಡೋ ಹೊಡೆದುರುಳಿಸಿದ ಭಾರತೀಯ ಸೇನೆ!

 
       ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ರದ್ದು ಮಾಡಿದ ಬಳಿಕ ಪಾಕಿಸ್ತಾನ ಯುದ್ಧೋನ್ಮಾದದಲ್ಲಿದೆ. ಪಾಕ್ ಗಡಿ ಭದ್ರತಾ ಪಡೆ(ಬಿಎಟಿ)ಯ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದ್ದು ಅಲ್ಲದೆ ಪಾಕ್ ನ ಇಬ್ಬರು ಕಮಾಂಡೋಗಳನ್ನು ಹೊಡೆದುರುಳಿಸಿದೆ.
    ಪಾಕಿಸ್ತಾನದ ಸ್ಪೆಷಲ್ ಸರ್ವೀಸ್ ಗ್ರೂಪ್(ಎನ್ ಎಸ್ ಜಿ) ಕಮಾಂಡೋಗಳು ಕಾಶ್ಮೀರದ ಗ್ಯುರೆಝ್ ಸೆಕ್ರ್ ನಲ್ಲಿ ದಾಳಿ ನಡೆಸಲು ಯತ್ನಿಸಿದ್ದರು. ಈ ವೇಳೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿ ಇಬ್ಬರು ಕಮಾಂಡೋಗಳನ್ನು ಹತ್ಯೆಗೈದಿದ್ದಾರೆ.
      ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಈಗಾಗಲೇ ನೂರಕ್ಕು ಹೆಚ್ಚು ಎನ್ ಎಸ್ ಜಿ ಕಮಾಂಡೋಗಳನ್ನು ನಿಯೋಜಿಸಿದೆ. ಇದರ ಜೊತೆಗೆ ಎನ್ ಎಸ್  ಜಿ ಕಮಾಂಡೋಗಳು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries