ಕಾಸರಗೋಡು: ಸನಾತನ ಪರಂಪರೆ ಆಧಾರದಲ್ಲಿ ನಡೆದು ಬರುತ್ತಿರುವ ಆಚಾರ ವಿಚಾರಗಳು ನಿತ್ಯ ನೈಮಿತ್ಯಾದಿ ನಡವಳಿಕೆಗಳು ಧರ್ಮದ ಮತ್ತು ವೈಜ್ಞಾನಿಕ ತಳಹದಿಯ ಮೇಲೆ ರೂಪಿತವಾದವುಗಳು. ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ನಮ್ಮ ಹಿಂದಿನ ಆಚಾರ ವಿಚಾರಗಳನ್ನು ಕಡೆಗಣಿಸಿ ಪಾಶ್ಚಾತ್ಯ ಸಂಸ್ಕøತಿಗೆ ಒಗ್ಗಿಕೊಳ್ಳುತ್ತಿರುವ ನಾವು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ನಂದಿನಿ ಯು. ಹೇಳಿದರು.
ಅವರು ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಕಾಸರಗೋಡು ಇದರ ಕೂಡ್ಲು ಉಪಸಂಘದ ನೇತೃತ್ವದಲ್ಲಿ ನಡೆದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮತ್ತು ಅಭಿನಂದನೆ ನೀಡುವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಸಂಘದ ಅಧ್ಯಕ್ಷ ಬಿ.ಸತೀಶ್ ಕೂಡ್ಲು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಂಘದ ಅಧ್ಯಕ್ಷ ಬಿ.ಪಿ.ವೆಂಕಟ್ರಮಣ ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳಾದ ಅಶ್ವಿನಿ ವಿ.ಕೆ, ಸತೀಶ್ ಸಿರಿಬಾಗಿಲು, ಭವ್ಯ ಕೆ, ಸುಶ್ಮಿತಾ ಕೆ, ತೇಜಸ್ವಿ, ಪ್ರತೀಕ್ಷಾ ಕೆ, ಸುಧೀಂದ್ರ ಕೆ. ಅವರಿಗೆ ಆರ್ಥಿಕ ಸಹಾಯ ನೀಡಿ ಅಭಿನಂದಿಸಿದರು.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಧನುಷ್ ಕೋಟೆಕಣಿ, ಪುರುಷೋತ್ತಮ ಕೂಡ್ಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಸ್ವಜಾತಿ ಬಾಂಧವರಿಗೆ ರಸ ಪ್ರಶ್ನೆ ಸ್ಪರ್ಧೆ ನಡೆಯಿತು. ಧನುಷ್ ಕೋಟೆಕಣಿ ಮತ್ತು ಸತೀಶ್ ಮಾಸ್ಟರ್ ನೇತೃತ್ವ ನೀಡಿದರು. ಅಶ್ವಿನಿ ಅವರಿಂದ ಭಾವಗೀತೆ ಗಾಯನ ನಡೆಯಿತು. ರಾಜೇಂದ್ರ ಕೂಡ್ಲು ಸ್ವಾಗತಿಸಿದರು. ಲಕ್ಷ್ಮೀಶ ವಂದಿಸಿದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.

