ಬದಿಯಡ್ಕ: ಹಿಂದಿಯು ಸುಲಭದ, ಸುಲಲಿತ ಭಾಷೆ. ಭಾಷೆ ಕಲಿಯುವುದರಿಂದ ವಿವಿಧ ಪ್ರದೇಶಗಳಲ್ಲಿ ಉದ್ಯೋಗ ಪಡೆಯಲು ಸುಲಭ ಎಂದು ಪೆರಡಾಲ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಮೊೈದು ಪಳ್ಳತ್ತಡ್ಕ ಹೇಳಿದರು.
ಶಾಲೆಯ ಹಿಂದಿ ಕ್ಲಬ್ ಆಶ್ರಯದಲ್ಲಿ ನಡೆದ ಹಿಂದಿ ದಿನಾಚರಣೆಯಲ್ಲಿ ಮಾತನಾಡಿದರು.
ಸೌಪರ್ಣಿಕ ಪ್ರತಿಜ್ಞೆ ಬೋಧಿಸಿದರು. ಉಪಾಧ್ಯಕ್ಷ ರಾಮ ಎಂ. ಶುಭಾಶಂಶನೆಗೈದರು. ಹಿಂದಿ ಭಾಷಣ, ಸಮೂಹಗಾಯನ ಮೊದಲಾದವು ನಡೆಯಿತು. ಹಿಂದಿ ಪರೀಕ್ಷೆ ಹಾಗೂ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಶಿಕ್ಷಕ ರಾಜಗೋಪಾಲ ಅಧ್ಯಕ್ಷತೆ ವಹಿಸಿದರು. ಹಿಂದಿ ಶಿಕ್ಷಕಿಯರಾದ ಬೀನಾ, ಚಂದ್ರಾವತಿ, ಜ್ಯೋತ್ಸ್ನಾ ನೇತೃತ್ವ ವಹಿಸಿದರು. ಶ್ರೀಧರನ್ ಸ್ವಾಗತಿಸಿ, ಗೋಪಾಲಕೃಷ್ಣ ಭಟ್ ವಂದಿಸಿದರು.