ಬದಿಯಡ್ಕ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಆಶ್ರಯದಲ್ಲಿ ಚಿಣ್ಣರ ಕಲರವ ಕಾರ್ಯಕ್ರಮವು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಬ್ಡಾಜೆಯಲ್ಲಿ ಶುಕ್ರವಾರ ಜರಗಿತು. ಫ್ಲವರ್ಸ್ ಚಾನಲ್ ಪ್ರತಿಭೆ ಮತ್ತು ಜಿಲ್ಲೆಯಲ್ಲಿ ತನ್ನ ನೃತ್ಯದ ಮೂಲಕ ಗುರುತಿಸಿಕೊಂಡಿರುವ ನವಜೀವನ ಶಾಲಾ ವಿದ್ಯಾರ್ಥಿಯೂ ಆಗಿರುವ ರತೀಶ್ ಕೃಷ್ಣ ಬೆಳ್ಳೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನನ್ನಂತಹ ಕಿರಿಯ ಪ್ರತಿಭೆಗೆ ಇಂತಹ ಅವಕಾಶಗಳನ್ನು ಕಲ್ಪಿಸಿ ಕೊಡುವುದರಿಂದ ನಮಗೆ ಕಲೆಗಳ ಪ್ರೀತಿ ಹೆಚ್ಚುತ್ತದೆ. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಪ್ರತಿಭೆಗಳಿಗೆ ಇಂತಹ ಪೆÇ್ರೀತ್ಸಾಹ ಸಿಗುವಂತಾಗಲಿ ಎಂದು ಅಭಿಪ್ರಾಯ ವ್ಕಕ್ತ ಪಡಿಸಿದನು.
ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಅವರು ಮಾತನಾಡಿ, ಬೆಳೆಯುವ ಪ್ರತಿಭೆಗೆ ಪೆÇ್ರೀತ್ಸಾಹ ಮತ್ತು ಮಾರ್ಗದರ್ಶನ ಆತ್ಯಗತ್ಯ. ಸಾಧನೆ ಎನ್ನುವುದು ಮಾರುಕಟ್ಟೆಯಲ್ಲಿ ಖರೀದಿಸಬಹುದಾದ ವಸ್ತುವಲ್ಲ. ಆದು ಪರಿಶ್ರಮದಿಂದ ಪಕ್ವಗೊಳ್ಳಬೇಕಾದದ್ದು . ಇಂತಹ ಸಾಧನೆ ಮಾಡಿದ ಪ್ರತಿಭೆಗಳಿಗೆ ಅವಕಾಶ ಕೊಟ್ಟು ಚಿಣ್ಣರ ಕಲರವ ಎಂಬ ಹೆಸರಿನಿಂದ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ. ಇದು ಗಡಿನಾಡ ಎಲ್ಲಾ ಕನ್ನಡ ಶಾಲೆಗಳಿಗೂ ತಲುಪುವಂತಾಗಲಿ ಎಂದು ಹೇಳಿದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮೊಯ್ದಿನ್ ಕುಂಞÂ, ಮಾತೃಸಂಘದ ಅಧ್ಯಕ್ಷೆ ಶಾಲಿನಿ, ಅಶ್ವಿನಿ, ಕಲಾವತಿ, ನೆಹಿಮಾ, ಅಂಬಿಕಾ, ಚಂದ್ರನ್, ರೇಶ್ಮಾಸುನಿಲ್, ಜಯಲಕ್ಷ್ಮಿ ಮುಳ್ಳೇರಿಯ ಮೊದಲಾದವರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಸಂಧ್ಯಾಗೀತಾ ಬಾಯಾರು ಸಂಗೀತ ಹಾಗೂ ಇತರ ಚಟುವಟಿಕೆಗಳ ಕುರಿತು ತರಬೇತಿ ನೀಡಿದರು. ಅಕಾಡೆಮಿ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಗತಿಸಿ, ಶಶಿಧರ ವಂದಿಸಿದರು.


