HEALTH TIPS

ಜಿ.ಎಂ.ಸಿ. ಚಹಾ ಪುಡಿ ಜಿಲ್ಲೆಯಲ್ಲಿ ನಿಷೇಧ

                 
        ಕಾಸರಗೋಡು: ಆಹಾರ ಸುರಕ್ಷೆ ಓಣಂ ಸ್ಕ್ವಾಡ್ ನಡೆಸಿದ ತಪಾಸಣೆಯಿಂದ ಕೃತಕ ಬಣ್ಣ ಬೆರೆಸಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿ.ಎಂ.ಸಿ. ಚಹಾಪುಡಿ ಬ್ಯಾಚ್ ನಂಬ್ರ-08 ರ ಸಂಗ್ರಹ, ವಿತರಣೆ ಮತ್ತು ಮರಾಟ ನಿಷೇಧಿಸಲಾಗಿದೆ ಎಂದು ಆದೇಶ ಪ್ರಕಟಿಸಲಾಗಿದೆ. ಕಾಸರಗೋಡು ಆಹಾರ ಸುರಕ್ಷೆ ಸಹಾಯಕ ಕಮೀಷನರ್ ಈ ಆದೇಶ ಹೊರಡಿಸಿದ್ದಾರೆ. ಕೋಯಿಕೋಡ್ ರೀಜನಲ್ ಅನೆಲೆಟಿಕಲ್ ಲ್ಯಾಬ್ ನಲ್ಲಿ ನಡೆಸಿದ ತಪಾಸಣೆಯಲ್ಲಿ ಕೃತಕ ಬಣ್ಣ ಬೆರೆಸಿರುವುದು ಪತ್ತೆಯಾಗಿದೆ. ಗಣಪತಿ ಮಾರ್ಕೆಟಿಂಗ್ ಕಂಪನಿ, ಡಾ.ರಾಜ್ ಕುಮಾರ್ ರಸ್ತೆ, ರಾಜಾಜಿ ನಗರ, ಬೆಂಗಳೂರು. ಎಂಬ ವಿಳಾಸದಲ್ಲಿ ಜಿ.ಎಂ.ಸಿ. ಚಹಾಪುಡಿ ಇಲ್ಲಿಗೆ ವಿತರಣೆಗೊಂಡಿತ್ತು. ಈ ಚಹಾಪುಡಿಯ ಸಂಗ್ರಹ, ವಿತರಣೆ ಮತ್ತು ಮಾರಾಟ ಕಾನೂನು ರೀತ್ಯಾ ಅಪರಾಧ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries