ಕಾಸರಗೋಡು: ಪಿ.ಎಸ್.ಸಿ. ರ್ಯಾಂಕ್ ಪಟ್ಟಿಯಲ್ಲಿರುವ ಕನ್ನಡ ಮಾಧ್ಯಮ ಎಚ್.ಎಸ್.ಎ. ಸಮಾಜ ವಿಜ್ಞಾನ ಸಹಿತ ಹಲವು ಅಧ್ಯಾಪಕ ಹುದ್ದೆಗಳ ನೇಮಕಾತಿಗಾಗಿ ಕಾಸರಗೋಡು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರ ಕಚೇರಿಯಿಂದ ಖಾಲಿ ಹುದ್ದೆಗಳ ಕುರಿತ ವಿವರವನ್ನು ಪಿಎಸ್‍ಸಿ ಗೆ ನೀಡದಿರುವ ಬಗ್ಗೆ ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಗದ್ದಲ ವೆಬ್ಬಿಸಿದ್ದು, ಕಳೆದ ಮೂರು ತಿಂಗಳಿನಿಂದ ಕನ್ನಡಿಗರಿಗೆ ಈ ಕಚೇರಿಯಲ್ಲಿ ಅನ್ಯಾಯವಾಗುತ್ತಿದೆಯೆಂದು ಆರೋಪಿಸಿದರು.
ಖಾಲಿ ಹುದ್ದೆಗಳ ಬಗ್ಗೆ ಪಿಎಸ್‍ಸಿಗೆ ವರದಿ ನೀಡದೆ ವಿಳಂಬಿಸಿರುವ ಹಿನ್ನೆಲೆಯಲ್ಲಿ ಅಧ್ಯಾಪಕರ ನೇಮಕಾತಿಗೆ ತಡೆಯುಂಟಾಗಿದೆ, ಈ ಬಗ್ಗೆ ಕೂಡಲೇ ಸ್ಪಷ್ಟೀಕರಣ ನೀಡುವಂತೆ ಅವರು ಆಗ್ರಹಿಸಿದರು. ಈ ಬಗ್ಗೆ ಸಭೆಯಲ್ಲಿದ್ದ ಉಪನಿರ್ದೇಶಕ ಇಲಾಖೆಯ ಅಧಿಕೃತರು ತಕ್ಷಣವೇ ಈ ಸಮಸ್ಯೆ ಪರಿಹರಿಸುವುದಾಗಿ ಭರವಸೆಯನ್ನು ನೀಡಿದ್ದಾರೆ.

