ಮುಳ್ಳೇರಿಯ: ಇತ್ತೀಚೆಗೆ ಅಗಲಿದ ಹಿರಿಯ ಚೇತನ, ಎಡನೀರು ಶ್ರೀ ಮಠದ ಪೂರ್ವ ಪ್ರಬಂಧಕರಾಗಿದ್ದ ಎಡನೀರು ರಾಮಕೃಷ್ಣ ರಾವ್ ಅವರ ಸ್ಮರಣಾರ್ಥ `ನುಡಿ ನಮನ' ಕಾರ್ಯಕ್ರಮವು ಬೋವಿಕ್ಕಾನದ ಶ್ರೀಪುರಿ ಅಡಿಟೋರಿಯಂನಲ್ಲಿ ಎಡನೀರು ಶ್ರೀ ಮಠದ ಜಯರಾಮ ಎಡನೀರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಧಾರ್ಮಿಕ ಮತ್ತು ರಾಜಕೀಯ ಮುಂದಾಳು ಕುಂಟಾರು ರವೀಶ್ ತಂತ್ರಿ ಅವರು ಮಾತನಾಡಿ ರಾಮಕೃಷ್ಣ ರಾವ್ ತಾನು ಮಾಡಿರುವ ಒಳ್ಳೆಯ ಕೆಲಸದ ಮುಖೇನ ಸಮಾಜದ ಜನರ ಹೃದಯದಲ್ಲಿ ಸ್ಥಾನಮಾನವನ್ನು ಗಳಿಸಿದ್ದಾರೆ. ರಾಜಕೀಯ ನೇತಾರನಾಗಿ ಒಂದು ಪಕ್ಷದಲ್ಲಿದ್ದರೂ ಇತರ ರಾಜಕೀಯ ಪಕ್ಷದವರಿಗೂ ಗೌರವ ನೀಡುತ್ತಿದ್ದು ಅವರ ಹೃದಯದಲ್ಲೂ ವಿಶಿಷ್ಠ ಸ್ಥಾನವನ್ನು ಪಡೆದು, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
ಕಾಸರಗೋಡಿನ ಡಾ.ಪದ್ಮನಾಭ ಭಟ್, ಬಾಲಕೃಷ್ಣ ಪೆರಿಯ, ಸಾಜಿದ್ ಮೊವ್ವಲ್, ಬಾಲಕೃಷ್ಣ ಆಚಾರಿ ಎಡನೀರು, ಇ.ಅಬೂಬಕ್ಕರ್ ಹಾಜಿ, ಹಕೀಂ ಕುನ್ನಿಲ್ ನುಡಿನಮನ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಯರಾಮ ಮಂಜತ್ತಾಯ ಎಡನೀರು ಅವರು ರಾಮಕೃಷ್ಣ ರಾವ್ ಅವರು ಶ್ರೀ ಮಠದ ಮುಖ್ಯ ಪ್ರಬಂಧಕರಾಗಿ ದೀರ್ಘಕಾಲ ನಿಷ್ಠಾವಂತರಾಗಿ ಸೇವೆ ಸಲ್ಲಿಸಿ ಎಡನೀರಿನ ಜನಮಾನಸದಲ್ಲಿ ವಿಶಿಷ್ಟವಾದ ಸ್ಥಾನವನ್ನು ಗಳಿಸಿದ್ದಾರೆ ಎಂದರು. ಸಿ.ವಿ.ಜೇಮ್ಸ್, ಶ್ರೀಜಿತ್ ಮಡಕ್ಕಲ್, ಕಾಟುಕೊಚ್ಚಿ ಕುಂಞÂಕೃಷ್ಣ ನಾಯರ್ , ಸಮಾಜದ ಗಣ್ಯ ವ್ಯಕ್ತಿಗಳು ಹಾಗೂ ರಾಮಕೃಷ್ಣ ರಾವ್ ಅವರ ಸ್ನೇಹಿತರು, ಅಪಾರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪತ್ನಿ ಸತ್ಯವತಿ, ಪುತ್ರ ಸತೀಶ್ ಎಡನೀರು ಮತ್ತು ಪುತ್ರಿಯರಾದ ಪದ್ಮಾ ಆಚಾರ್ಯ, ಇಂದಿರಾ ಭಟ್, ಮಮತಾ ಪ್ರಕಾಶ್, ಸರ್ವಮಂಗಳಾ ರಾವ್ , ಸೊಸೆ ಶ್ರೀಲತಾ ಸತೀಶ್, ಅಳಿಯಂದಿರಾದ ನ್ಯಾಯವಾದಿ ಕೆ.ಆರ್.ಆಚಾರ್ಯ ಪುತ್ತೂರು, ಜಯಪ್ರಕಾಶ್ ಬೈಪಡಿತ್ತಾಯ ಆಲೆಟ್ಟಿ ಮತ್ತು ಮೊಮ್ಮಕ್ಕಳು, ಅಪಾರ ಬಂಧುಗಳು ಉಪಸ್ಥಿತರಿದ್ದರು.
ರಾಮಕೃಷ್ಣ ರಾವ್ ಅವರ ಪುತ್ರಿ ಸರ್ವಮಂಗಳಾ ರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪುತ್ರಿ ಪದ್ಮಾ ಕೆ.ಆರ್.ಆಚಾರ್ಯ ಪುತ್ತೂರು ಅವರು ನುಡಿನಮನ ಸಲ್ಲಿಸಿ ವಂದಿಸಿದರು.


