ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಶಾಲಾ ಹಳೆ ವಿದ್ಯಾರ್ಥಿ ಸಂಘ ಗ್ರಂಥಾಲಯ ನೇತೃತ್ವದಲ್ಲಿ ಹಿರಿಯ ಪ್ರಾಥಮಿಕ ಹಾಗೂ ಹೈಸ್ಕೂಲ್ ವಿಭಾಗದ ಬಾಲವೇದಿಯ ಸದಸ್ಯರಿಗೆ ಗ್ರಂಥಾಲಯ ಮಟ್ಟದ ಬಾಲೋತ್ಸವ ಸ್ಪರ್ಧೆಗಳು ಇತ್ತೀಚೆಗೆ ನಡೆಯಿತು.
ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲಿನ ಜೊತೆ ಕಾರ್ಯದರ್ಶಿ ಡಿ.ಕಮಲಾಕ್ಷ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಂಥಾಲಯದ ಅಧ್ಯಕ್ಷ ರಾಮಚಂದ್ರ.ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಂಥಾಲಯ ಉಪಾಧ್ಯಕ್ಷ ರಾಮಚಂದ್ರ ಮಾಸ್ತರ್, ಜೊತೆ ಕಾರ್ಯದರ್ಶಿ ಸತೀಶ್, ಸಮಿತಿ ಸದಸ್ಯರುಗಳಾದ ಸ್ವಪ್ನ ಭಟ್, ಮೃದುಲಾ ಟೀಚರ್ ಮೊದಲಾದವರು ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಗ್ರಾ.ಪಂ. ಸದಸ್ಯೆ ಕುಸುಮಾ ಬಹುಮಾನ ವಿತರಿಸಿದರು. ಸಂಘದ ಕಾರ್ಯದರ್ಶಿ ಸುರೇಶ ಬಂಗೇರ ಸ್ವಾಗತಿಸಿ, ಗ್ರಂಥಪಾಲಕಿ ತುಳಸಿ ವಂದಿಸಿದರು.


