ಮಂಜೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ವತಿಯಿಂದ ಸೆಪ್ಟೆಂಬರ್ 14 ರಿಂದ 20 ರ ವರೆಗೆ `ಸೇವಾ ಸಪ್ತಾಹ ಆಚರಣೆ' ಭಾಗವಾಗಿ ಯುವಮೋರ್ಚಾ ಮಂಜೇಶ್ವರ ಪಂಚಾಯತಿ ಸಮಿತಿ ವತಿಯಿಂದ ಮಂಜೇಶ್ವರ ಕಾಲನಿಯ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ನಿತ್ಯೋಪಯೋಗಿ ವಸ್ತುಗಳು ಹಾಗೂ ಅಕ್ಕಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯುವಮೋರ್ಚಾ ಮಂಜೇಶ್ವರ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಶ್‍ಪಾಲ್ ಮಂಜೇಶ್ವರ ಮತ್ತು ಕಾರ್ಯಕರ್ತರಾದ ಗಣೇಶ್, ಯೋಗೇಶ್, ದೀಕ್ಷಿತ್, ಅಕ್ಷಯ್ ಹಾಗೂ ಪಕ್ಷದ ಹಿರಿಯ ಕಾರ್ಯಕರ್ತ ಚಕ್ರೇಶ್ ನೇತೃತ್ವ ನೀಡಿದರು.


