ಕಾಸರಗೋಡು: ಸಮೃದ್ದ ಸಾಂಸ್ಕøತಿಕ, ಸಾಮಾಜಿಕ ಹಿನ್ನೆಲೆಯುಳ್ಳ ತುಳು ಭಾಷೆ ಹೋರಾಟದ ಭಾಷೆಯಾಗಿ ಚಾರಿತ್ರಿಕ ಮಹತ್ವ ಹೊಂದಿದೆ. ಕಾಸರಗೋಡಿನ ತುಳು ಭಾಷೆ, ಸಂಸ್ಕøತಿಯ ಪುನರುತ್ಥಾನಗಳಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವುಗಳ ಮೂಲಕ ಸದಾ ಬೆಂಬಲ ನೀಡಲಿದೆ ಎಂದು ಕೇರಳ ತುಳು ಅಕಾಡೆಮಿ ಖಜಾಂಜಿ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ತಿಳಿಸಿದರು.
ಕೇರಳ ತುಳು ಅಕಾಡೆಮಿಯ ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ಕಿರು ಸಭಾಂಗಣದಲ್ಲಿ ನಡೆದ ತುಳು ಕವಿಗಳು, ಸಾಹಿತಿಗಳು ಹಾಗೂ ಲೇಖಕರ ವಿಶೇಷ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಡಿನಾಡಿನ ಸಮೃದ್ದತೆಯ ಪ್ರತೀಕವಾದ ತೌಳವ ಪರಂಪರೆ, ಆಚರಣೆ, ನಂಬಿಕೆಗಳೇ ಮೊದಲಾದ ಮೂಲ ಬೇರುಗಳ ಸಂರಕ್ಷಣೆಗೆ ಅಕಾಡೆಮಿ ಸನ್ನದ್ದವಾಗುತ್ತಿದೆ.ಸುಧೀರ್ಘ ಅವಧಿಯ ಬಳಿಕ ಮಂಜೇಶ್ವರ ಹೊಸಂಗಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅಕಾಡೆಮಿಯ ಕಾರ್ಯಲಯವನ್ನು ಕೇಂದ್ರವಾಗಿರಿಸಿ ಬಹುಮುಖ ಆಯಾಮದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ಥಕ್ಯವನ್ನು ಕಂಡುಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಚೀನ ತೌಳವ ಸಾಂಸ್ಕøತಿಕ ಅಧ್ಯಯನಗಳಿಗೆ ಆಸ್ಪದ ನೀಡುವ ನಿಟ್ಟಿನಲ್ಲಿ ಅಕಾಡೆಮಿಯ ನಿರ್ಮಾಣಗೊಳ್ಳುತ್ತಿರುವ ತುಳು ಭವನ ಕಟ್ಟಡ ಸಾಕಾರಗೊಳ್ಳಲಿದೆ. ಪುಸ್ತಕ ಭಂಡಾರ, ವಾಚನಾಲಯ, ಸಭಾ ಭವನ ಮೊದಲಾದ ಚಿಂತನೆಗಳೊಂದಿಗೆ ಪ್ರಾಥಮಿಕ ಹಂತದ ಕೆಲಸಗಳು ಪೂರ್ತಿಗೊಳ್ಳುತ್ತಿದೆ. ಡಿಸೆಂಬರ್ ತಿಂಗಳಲ್ಲಿ ತುಳು ಭವನದ ಲೋಕಾರ್ಪಣೆ ಸಮಾರಂಭ ಹಮ್ಮಿಲಕೊಳ್ಳಲಾಗುವುದು ಎಂದು ತಿಳಿಸಿದರು. ಎರಡನೇ ಹಂತದಲ್ಲಿ ವಸ್ತು ಸಂಗ್ರಹಾಲಯ, ಪೂರ್ಣ ಪ್ರಮಾಣದ ರಂಗಮಂದಿರವನ್ನೊಳಗೊಂಡಂತೆ ವಿಸ್ಕøತ ಮಟ್ಟದ ಕಾರ್ಯಚಟುವಟಿಕೆಗಳನ್ನು ಮುನ್ನಡೆಸಲಾಗುವುದೆಂದು ಅವರು ತಿಳಿಸಿದರು.
ಹಿರಿಯ ಪತ್ರಕರ್ತ, ಸಾಹಿತಿ ಮಲಾರ್ ಜಯರಾಮ ರೈ ಅವರು ಉಪಸ್ಥಿತರಿದ್ದು ಮಾತನಾಡಿ, ತುಳು ಭಾಷೆ ರಾಜ ಭಾಷೆ, ಹಿಂದೆ ಆಡಳಿತ ಭಾಷೆಯಾಗಿದ್ದ ಅದು, ಇಂದು ಪ್ರಜಾಪ್ರಭುತ್ವದಲ್ಲಿ ಬಹುಜನರ ಸಂಪರ್ಕ ಭಾಷೆಯಾಗಿ ಜನಜನಿತವಾಗಿದೆ. ಹೊಸ ತಲೆಮಾರಿಗೆ ಸಂಸ್ಕøತಿ ಅರಿವನ್ನು ಮೂಡಿಸುವ ಕೆಲಸ ಅಕಾಡೆಮಿಯ ಮೂಲಕ ಸಾಧ್ಯವಾಗಬೇಕು. ಬರಹಗಾರರು, ಕವಿಗಳನ್ನು , ಕಲಾವಿದರನು ಒಗ್ಗೂಡಿಸಿ ಸಾಂಸ್ಕøತಿಕ -ಸಾಹಿತ್ತಿಕ ಬಲವರ್ಧನೆಗೆ ಅಕಾಡೆಮಿ ಕಾರ್ಯತತ್ಪರವಾಗಬೇಕು ಎಂದು ತಿಳಿಸಿದರು.
ಕಣ್ಣೂರು ವಿಶ್ವವಿದ್ಯಾನಿಲಯದ ಕಾಸರಗೋಡು ಚಾಲದಲ್ಲಿರುವ ಭಾರತೀಯ ಭಾಷಾ ಅಧ್ಯಯನ ಕೇಂದ್ರದ ಕನ್ನಡ ವಿಭಾಗ ಮುಖ್ಯಸ್ಥ ಡಾ.ರಾಜೇಶ್ ಬೆಜ್ಜಂಗಳ, ಸಾಹಿತಿ, ಅಕಾಡೆಮಿ ಸದಸ್ಯ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉಪಸ್ಥಿತರಿದ್ದು ಮಾತನಾಡಿದರು.
ಸಾಹಿತ್ಯ, ಕಲಾ ವಲಯಗಳ ಸಾಧಕರಾದ ಶಂಕರ ಸ್ವಾಮಿಕೃಪಾ, ರಾಜಶ್ರೀ ಟಿ.ರೈ ಪೆರ್ಲ, ವಿದ್ಯಾ ಗಣೇಶ್ ಅಣಂಗೂರು, ಕುಶಾಲಾಕ್ಷಿ ವಿ.ಕುಲಾಲ್, ಕೇಶವ ಶೆಟ್ಟಿ ಆದೂರು, ಉದಯ ಸಾರಂಗ್, ಸುಂದರ ಬಾರಡ್ಕ, ಪ್ರೊ.ಜಯರಾಜ್ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಅಕಾಡೆಮಿ ಕಾರ್ಯದರ್ಶಿ ವಿಜಯಕುಮಾರ್ ಪಾವಳ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸದಸ್ಯೆ ಭಾರತೀ ಬಾಬು ಕಾಸರಗೋಡು ವಂದಿಸಿದರು. ಶಶಿ ಕುಳೂರು ಸಹಕರಿಸಿದರು.