ಕಾಸರಗೋಡು:ಅರಣ್ಯ ಇಲಾಖೆ ವತಿಯಿಂದ ನಡೆಸಲಾಗುವ ವನ್ಯಜೀವಿ ಸಪ್ತಾಹ ಅಂಗವಾಗಿ ಅ.2,3ರಂದು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಶಾಲೆ,ಕಾಲೇಜು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಅ.2ರಂದು ಬೆಳಗ್ಗೆ 9.30ರಿಂದ 11.30ವರೆಗೆ ಕಿರಿಯ,ಹಿರಿಯ ಪ್ರಾಥಮಿಕ ಶಾಲೆ, ಕಾಲೇಜು ವಿದ್ಯಾರ್ಥೊಗಳಿಗಾಗಿ ಪೆನ್ಸಿಲ್ ಡ್ರಾಯಿಂಗ್, ಬೆಳಗ್ಗೆ 11.45ರಿಂದ 12.45 ವರೆಗೆ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ(ಕನ್ನಡ, ಮಲೆಯಾಳಂ), ಮಧ್ಯಾಹ್ನ 2.15ರಿಂದ ಸಂಜೆ 4.15 ವರೆಗೆ ಕಿರಿಯ, ಹಿರಿಯ ಪ್ರಾಥಮಿಕ ಸಾಲೆ, ಕಾಲೇಜು ವಿದ್ಯರ್ಥಿಗಳಿಗೆ ಜಲವರ್ಣ ಚಿತ್ರರಚನೆ ಸ್ಪರ್ಧೆ ನಡೆಯಲಿದೆ. ಅ.3ರಂದು ಬೆಳಗ್ಗೆ 10ರಿಂದ ಪ್ರೌಢಶಾಲೆ, ಕಾಲೇಜು ವಿದ್ಯಾರ್ರತಿಗಳಿಗೆ ರಸಪ್ರಶ್ನೆ ಸ್ಪರ್ಧೆ, ಮಧ್ಯಾಹ್ನ 2 ಗಂಟೆಯಿಂದ ಪ್ರೌಢಶಾಲೆ, ಕಾಲೇಜು ವಿದ್ಯಾರ್ರತಿಗಳಿಗೆ ಭಾಷಣ ಸ್ಪರ್ಧೆ (ಕನ್ನಡ, ಮಲೆಯಾಳಂ) ನಡೆಯಲಿದೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರತಿ ಶಿಕ್ಷಣಾಲಯಗಳಿಂದತಲ ಇಬ್ಬರಂತೆ ಒಂದು ತಂಡ, ಇತರ ಸ್ಪರ್ಧೆಗಳಲ್ಲಿ ಪ್ರತಿ ಸ್ಪರ್ಧೆಯಲ್ಲಿ ತಲಾ ಇಬ್ಬರಂತೆ ಒಂದು ಶಿಕ್ಷಣಾಲಯದಿಂದ ಭಾಗವಹಿಸಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆಯುವವರು ಅ.8ರಂದು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತರು ಶಾಲೆ, ಕಾಲೇಉಗಳ ಮುಖ್ಯಸ್ಥರ ದೃಡೀಕರಣ ಪತ್ರ ಸಹಿತ ಅ.2,3ರಂದು ಬೆಳಗ್ಗೆ 8.30ರ ವೇಳೆಗೆ ಕಾಸರಗೋಡು ಸರಕಾರಿ ಕಾಲೇಗೆ ಆಗಮಿಸಿ ಹೆಸರು ನೋಂದಣಿ ನಡೆಸಬೇಕು. ಮಾಹಿತಿಗೆ ಅಸಿಸ್ಟೆಂಟ್ ಫೋರೆಸ್ಟ್ ಕನ್ಸರ್ ವೇಟರ್, ಸಾಮೂಹ್ಯ ವನವಲ್ಕರಣ ವಿಭಾಗ, ವನಶ್ರೀ ಕಾಂಪ್ಲೆಕ್ಸ್, ಉದಯಗಿರಿ(ಪಿ.ಒ.) ವಿದ್ಯಾನಗರ, ಕಾಸರಗೋಡು. ದೂರವಾಣಿ ಸಂಖ್ಯೆ:04994-255234 ಸಂಪರ್ಕಿಸಬಹುದು

