HEALTH TIPS

ಪರಿಷ್ಕøತ ಯೋಜನೆಗಳಿಗೆ ಜಿಲ್ಲಾ ಯೋಜನೆ ಸಮಿತಿ ಸಭೆ ಮಂಜೂರಾತಿ

           
     ಕಾಸರಗೋಡು;  ಜಿಲ್ಲೆಯ 17 ಸ್ಥಳೀಯಾಡಳಿತ ಸಂಸ್ಥೆಗಳ ಪರಿಷ್ಕøತ ಯೋಜನೆಗಳಿಗೆ ಜಿಲ್ಲಾ ಯೋಜನೆ ಸಮಿತಿ ಸಭೆ ಮಂಜೂರಾತಿ ನೀಡಿದೆ.
          ಸಮಿತಿಯ ಸಬಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು.
                 ಸರಕಾರದ ನಿರ್ದೇಶನದಂತೆ ಯೋಜನೆಗಳ ರೂಪುರೇಷೆ ಪರಿಷ್ಕರಣೆ ನಡೆಸಲು ಸಲ್ಲಿಸಿದ್ದ 223 ಯೋಜನೆಗಳಿಗೆ, 188 ನೂತನ ಯೋಜನೆಗಳಿಗೆ ಸಭೆ ಮಂಜೂರಾತಿ ನೀಡಿದೆ. ಎಣ್ಮಕಜೆ, ಪುಲ್ಲೂರು-ಪೆರಿಯ,ಕುತ್ತಿಕೋಲು, ತ್ರಿಕರಿಪುರ, ವಲಿಯಪರಂಬ, ಕಯ್ಯೂರು-ಚೀಮೇನಿ, ಅಜಾನೂರು, ಚೆಮ್ನಾಡು, ಮಂಜೇಶ್ವರ, ಬೆಳ್ಳೂರು, ಚೆರುವತ್ತೂರು, ಪಡನ್ನ, ಮೊಗ್ರಾಲ್ ಪುತ್ತೂರು, ಬೇಡಡ್ಕ ಗ್ರಾಮಪಂಚಾಯತ್ ಗಳ, ನೀಲೇಶ್ವರ ನಗರಸಭೆಯ, ಕಾಸರಗೋಡು ಬ್ಲೊಕ್ ಪಂಚಾಯತ್ ನ ವಿವಿಧ ಯೋಜನೆಗಳಿಗೆ ಈ ರೀತಿ ಮಂಜೂರಾತಿ ಲಭಿಸಿದೆ.
        ಸಾರ್ವಜನಿಕ ವಿಭಾಗದಲ್ಲಿ ಶೇ 14.33 ಕಾಮಗಾರಿಗಳು, ಪರಿಶಿಷ್ಟ ಪಂಗಡ ವಿಬಾಗದಲ್ಲಿ ಶೇ 18.32 ಸಹಿತ ಶೇ 21.62 ಮೊಬಲಗು ವಿವಿಧ ಯೋಜನೆಗಳಿಗಾಗಿ ಈ ಆರ್ಥಿಕ ವರ್ಷದಲ್ಲಿ ವಿನಿಯೋಗವಾಗಿದೆ. ಉತ್ಪಾದನೆ ವಲಯದಲ್ಲಿ ಶೇ 5.6, ಸೇವಾ ವಲಯದಲ್ಲಿ ಶೇ 48.76, ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಶೇ 45.56, ನಿಧಿ ವೆಚ್ಚಮಡಲಾಗಿದೆ. ನಿರ್ವಹಣೆ ಸಿಬ್ಬಂದಿಯ ಕೊರತೆಯಿಂದ ಅನೇಕ ಯೋಜನೆಗಳ ಪೂರ್ತೀಕರಣಕ್ಕೆ ತಡೆಯಾಗುತ್ತಿದೆ ಎಂದು ಜನಪ್ರತಿನಿಧಿಗಳು ಸಭೆಯಲ್ಲಿ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಮುಂಭಾಗದಲ್ಲಿ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆ ಸ್ಥಾಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಆದೇಶ ಪ್ರಕಾರ ಗ್ರಾಮಪಂಚಾಯತ್ ಗಳು ಸ್ವಂತ ನಿಧಿ ಮೀಸಲಿರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದರು. ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಖೆ ಯ ಪ್ರಕಟಣೆಗಳಾದ ಜನಪಥಂ, ಕೇರಳ ಕಾಲಿಂಗ್ ಮಾಸಪತ್ರಿಕೆಗಳ ಪ್ರಸರಣ ಹೆಚ್ಚಿಸುವ ನಿಟ್ಟಿನಲ್ಲಿ ಕ್ಯಾಂಪೇನ್ ನಡೆಸಲೂ ಸಭೆ ನಿರ್ಧಾರ ಕೈಗೊಂಡಿದೆ. ವಾರ್ಡ್ ಮಟ್ಟಕ್ಕೆ, ಗ್ರಂಥಾಲಯಗಳಿಗೆ ಈ ಪ್ರಕಟಣೆಗಳು ಲಭ್ಯ ವಾಗುವಂತೆ ಮಾಡಲಾಗುವುದು.
     ರಾಷ್ಟ್ರೀಯ ಹರಿತ ಟ್ರಿಬ್ಯೂನಲ್ ಆದೇಶ ಪ್ರಕಾರ ಜಿಲ್ಲೆಯ ಕಿನಾನೂರು-ಕರಿಂದಳಂ, ಮಡಿಕೈ, ಬೇಡಡ್ಕ ಪಂಚಾಯತ್ ಗಳನ್ನು ಅ.31ರ ಮುಂಚಿತವಾಗಿ ಸಂಪೂರ್ಣ ತ್ಯಾಜ್ಯ ಮುಕ್ತ ಪಂಚಾಯತ್ ಗಳು ಎಂಬ ಘೋಷಣೆ ನಡೆಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಬೇಡಡ್ಕ ಗ್ರಾಮಪಂಚಾಯತ್ ನಲ್ಲಿ ನಡೆಸಲಾಗುವ ತ್ಯಾಜ್ಯನಿವಾರಣೆ ಯೋಜನೆ ಬಗ್ಗೆ ಪಂಚಾಯತ್ ಅಧ್ಯಕ್ಷ ಸಿ.ರಾಮಚಂದ್ರನ್ ಮಾಹಿತಿ ನೀಡಿದರು. ಕ್ರೀಯಾ ಯೋಜನೆಯ ರೂಪುರೇಷೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅವರಿಗೆ ಹಸ್ತಾಂತರಿಸಲಾಯಿತು. ಲೈಫ್ ಮಿಷನ್ ವಸತಿ ಯೋಜನೆ ಸಂಬಂಧ ಮಿಷನ್ಜಿಲ್ಲಾ ಸಂಚಾಲಕ ಎಂ.ವತ್ಸನ್ ಮಾಹಿತಿ ನೀಡಿದರು. ಸ್ವಚ್ಛ ಭಾರತ್ ಮಿಷನ್ ತಳಹದಿಯಲ್ಲಿ ಜಿಲ್ಲೆಯಲ್ಲಿ ಜಾರಿಗೊಳಿಸುವ ಯೋಜನೆಗಳ ಕುರಿತು ಮಿಷನ್ ಜಿಲ್ಲಾ ಸಂಚಾಲಕ ಪಿ.ವಿ.ಸಜೀರ್ ಮಾಹಿತಿ ನೀಡಿದರು. ಜಿಲ್ಲಾ ಯೋಜನೆ ಅಧಿಕಾರಿ ಎಸ್.ಸತ್ಯ ಪ್ರಕಾಶ್, ಡಿ.ಪಿ.ಸಿ.ಸರಕಾರಿ ನೋಮಿನಿ ಕೆ.ಬಾಲಕೃಷ್ಣನ್, ಯೋಜನೆ ಸಮಿತಿ ಸದಸ್ಯರಾದ ಇ.ಪದ್ಮಾವತಿ, ಹರ್ಷಾದ್ ವರ್ಕಾಡಿ, ಷಾನವಾಝ್ ಪಾದೂರು, ವಿ.ಪಿ.ಜುಬೈದಾ,ಪುಷ್ಪಾ ಅಮೆಕ್ಕಳ, ಎಂ.ನಾರಾಯಣನ್, ಮುಂತಾಝ್ ಝಮೀರ, ಫರೀದಾ ಝಕೀರ್ ಅಹಮ್ಮದ್, ಗ್ರಾಮಪಂಚಾಯತ್ ಅಸೋಸಿಯೇಶನ್ ಅಧ್ಯಕ್ಷ ಎ.ಎ.ಜಲೀಲ್, ಕಾಸರಗೋಡು ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ನೀಲೇಶ್ವರ ನಗರಸಭೆ ಅಧ್ಯಕ್ಷ ಪ್ರೊ.ಕೆ.ಪಿ.ಜಯರಾಜನ್, ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಸಿಬ್ಬಂದಿ ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries