ಪೆರ್ಲ: ನೂತನವಾಗಿ ಅಸ್ವಿತ್ವಕ್ಕೆ ಬರುತ್ತಿರುವ ಸಾತ್ವಿಕ ಧಾರ್ಮಿಕ ಸಾಂಸ್ಕøತಿಕ ಸಾಹಿತ್ತಿಕ ಕಲಾಸಂಘ ಪೆರ್ಲ ಇದರ ಉದ್ಘಾಟನಾ ಸಮಾರಂಭ ಇಂದು(ಸೆ.22) ಬೆಳಿಗ್ಗೆ 10.30ರಿಂದ ಇಡಿಯಡ್ಕ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರ ಸಭಾಂಗಣದಲ್ಲಿ ನಡೆಯಲಿದೆ.
ಸಂಘಟನೆಯನ್ನು ಹಿರಿಯ ಧಾರ್ಮಿಕ, ಸಾಮಾಜಿಕ ಮುಂದಾಳು ಟಿ.ಆರ್.ಕೆ.ಭಟ್ ಉದ್ಘಾಟಿಸುವರು. ಈ ಸಂದರ್ಭ ಆಚರಣೆಗಳಲ್ಲಿ ಭಜನಾ ಸಂಸ್ಕøತಿ ವಿಷಯದ ಬಗ್ಗೆ ಖ್ಯಾತ ಸಂಕೀರ್ತನೆಕಾರ ರಾಮಕೃಷ್ಣ ಕಾಟುಕುಕ್ಕೆ, ಯಕ್ಷಗಾನದಲ್ಲಿ ಆಧುನಿಕ ಪ್ರಭಾವ ವಿಷಯದ ಬಗ್ಗೆ ಹಿರಿಯ ಯಕ್ಷಗಾನ ಕಲಾವಿದ ಅಪ್ಪಕುಂಞÂ, ಧಾರ್ಮಿಕತೆ ಮತ್ತು ಸಾಹಿತ್ಯ ವಿಷಯದ ಬಗ್ಗೆ ಲೇಖಕಿ, ಕವಯಿತ್ರಿ ಅಕ್ಷತಾರಾಜ್ ಪೆರ್ಲ ಉಪನ್ಯಾಸ ನೀಡುವರು. ಬಳಿಕ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಹಿರಿಯ, ಯುವ ಹಾಗೂ ಉದಯೋನ್ಮುಖ ಕವಿ-ಕವಯತ್ರಿಗಳಿಂದ ಕವಿಗೋಷ್ಠಿ ನಡೆಯಲಿದೆ. ಹಿರಿಯ ಸಾಹಿತಿ ಡಾ.ಸುರೇಶ್ ನೆಗಳಗುಳಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕವಿಗೋಷ್ಠಿಯನ್ನು ಸಾಹಿತಿ ಡಾ.ಎಸ್.ಎನ್.ಭಟ್ ಪೆರ್ಲ ಉದ್ಘಾಟಿಸುವರು.


