ಪೆರ್ಲ: ಜನ ಸಾಮಾನ್ಯರನ್ನು ಸತಾಯಿಸಿ ದುರಹಂಕಾರದ ಜವಾಬ್ದಾರಿ ರಹಿತ ಕಾರ್ಯ ನಿರ್ವಹಣೆಯನ್ನು ತೋರ್ಪಡಿಸುವ ಶೇಣಿ ಗ್ರಾಮಾಧಿಕಾರಿಯ ಜನ ವಿರೋಧ ನೀತಿಯನ್ನು ಖಂಡಿಸಿ ಸಿಪಿಐಎಂ ಎಣ್ಮಕಜೆ ಲೋಕಲ್ ಸಮಿತಿಯ ನೇತೃತ್ವದಲ್ಲಿ ಧರಣಿ ಮುಷ್ಕರ ನಡೆಯಿತು. ಈ ಸಂದರ್ಭ ನಡೆದ ಪ್ರತಿಭಟನಾ ಸಭೆಯನ್ನು ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಶಂಕರ ರೈ ಮಾಸ್ತರ್ ಉದ್ಘಾಟಿಸಿ ಮಾತನಾಡಿ, ಜನರಿಗೆ ಪ್ರಯೋಜನಕಾರಿಯಾಗಿ ಕಾರ್ಯ ನಿರ್ವಹಿಸಬೇಕಾದ ಗ್ರಾಮಾಧಿಕಾರಿ ಸರ್ಕಾರದ ಸಂಬಳ ಸ್ವೀಕರಿಸಿ ದರ್ಪ ತೋರ್ಪಡಿಸುವುದು ಅಹಂಕಾರದ ಪರಮಾವಧಿಯಾಗಿದ್ದು ಅವರಿಂದ ಜನಪರ ಕೆಲಸ ನಿರ್ವಹಿಸುವಂತಾಗಿಸಲು ಸಿಪಿಐಎಂ ಪಕ್ಷ ಈ ಜನಕೀಯ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದರು.
ಸಿಪಿಐಎಂ ಎಣ್ಮಕಜೆ ಲೋಕಲ್ ಸಮಿತಿ ಸದಸ್ಯ ನಾರಾಯಣ ವೈ ಅಧ್ಯಕ್ಷತೆವಹಿಸಿದ್ದರು.ಸಿಪಿಐಎಂ ಕುಂಬಳೆ ಏರಿಯಾ ಸಮಿತಿ ಕಾರ್ಯದರ್ಶಿ ಸುಬೈರ್ ಸಿ.ಎ., ಸಿಐಟಿಯು ಕುಂಬಳೆ ಏರಿಯಾ ಕಾರ್ಯದರ್ಶಿ ಸುಬ್ಬಣ್ಣ ಆಳ್ವ ಪುತ್ತಿಗೆ, ಏರಿಯಾ ಸದಸ್ಯ ಶಿವಪ್ಪ ಆಳ್ವ ಅಂಗಡಿಮೊಗರು,ಪುಷ್ಪಾ ಎಂ ಉಪಸ್ಥಿತರಿದ್ದು ಮಾತನಾಡಿದರು. ಎಣ್ಮಕಜೆ ಲೋಕಲ್ ಸಮಿತಿ ಕಾರ್ಯದರ್ಶಿ ವಿನೋದ್ ಪೆರ್ಲ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.ಲೋಕಲ್ ಸಮಿತಿ ಸದಸ್ಯರಾದ ಮೊಹಮ್ಮದ್ ಹನೀಫ್ ನಡುಬೈಲು, ರಾಮಕೃಷ್ಣ ರೈ ಕುದ್ವ, ಅಬ್ದುಲ್ಲ ಬಾಳಿಕೆ ಪೆರ್ಲ, ನಸೀರ್ ಮಲಂಗರೆ,ಅವಿನಾಶ್ ಸಿ.ಎಚ್, ಇಬ್ರಾಹಿಂ ಮಾಸ್ತರ್ ಪಳ್ಳ,ಸದಾನಂದ ಕುಲಾಲ್ ನಲ್ಕ ಮೊದಲಾದವರು ಉಪಸ್ಥಿತರಿದ್ದರು. ಸಾರ್ವಜನಿಕಸಭೆಯ ಮೊದಲು ಶೇಣಿ ಬಸ್ ನಿಲ್ದಾಣದಿಂದ ಗ್ರಾಮ ಕಚೇರಿಯ ತನಕ ಪ್ರತಿಭಟನಾ ಮೆರವಣಿಗೆ ನಡೆಯಿತು.


