ಕಾಸರಗೋಡು: ದಕ್ಷಿಣ ಭಾರತದಲ್ಲಿ ಉಗ್ರರ ದಾಳಿ ಸಾಧ್ಯತೆ ಬಗ್ಗೆ ಸೇನೆಯ ದಕ್ಷಿಣ ವಲಯ ಕಮಾಂಡರ್ ಇನ್ ಚೀಫ್ ಲೆಪ್ಟಿನೆಂಟ್ ಜನರಲ್ ಎಸ್.ಕೆ.ಸೈನಿ ಮುನ್ನೆಚ್ಚರಿಕೆ ನೀಡಿದ್ದಾರೆ.
ಗುಜರಾತಿನ ಸರ್‍ಕ್ರಿಕ್‍ನ ಅರಬಿ ಸಮುದ್ರದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಬೋಟೊಂದು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಉಗ್ರ ದಾಳಿ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಬೋಟ್‍ಗಳ ಬಗ್ಗೆ ನಿಗಾ ಇರಿಸಲಾಗಿದೆ ಎಂದು ಸೈನಿ ತಿಳಿಸಿದ್ದಾರೆ.
ಉಗ್ರರ ದಾಳಿ ಸಾಧ್ಯತೆಯ ಮುನ್ನೆಚ್ಚರಿಕೆ ಹಿನ್ನೆಯಲ್ಲಿ ಕೇರಳದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದ ರಾಷ್ಟ್ರೀಯ ಹಬ್ಬ ಓಣಂ ದಿನಗಳಲ್ಲಿ ಜನ ದಟ್ಟಣೆ ಇರುವ ಸ್ಥಳಗಳಲ್ಲಿ ತಪಾಸಣೆಯನ್ನು ಬಿಗುಗೊಳಿಸಲಾಗಿದೆ. ಸಂಶಯಾಸ್ಪದವಾಗಿ ಏನಾದರೂ ಕಂಡಲ್ಲಿ 112 ನಂಬ್ರದಲ್ಲಿ ಕರೆ ಮಾಡಿ ಮಾಹಿತಿ ನೀಡುವಂತೆ ಡಿಜಿಪಿ ಲೋಕನಾಥ್ ಬೆಹ್ರಾ ತಿಳಿಸಿದ್ದಾರೆ. ಡಿಜಿಪಿ ನಿರ್ದೇಶದಂತೆ ಕಾಸರಗೋಡು ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ತಿಳಿಸಿದ್ದಾರೆ. ಶಂಕಿತ ವ್ಯಕ್ತಿಗಳು ಕಂಡು ಬಂದಲ್ಲಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುವುದು. ಗಡಿ ಪ್ರದೇಶದಲ್ಲಿ ಬಿಗು ಬಂದೋಬಸ್ತು ಏರ್ಪಡಿಸಲಾಗುವುದು. ರಾತ್ರಿ ಕಾಲದಲ್ಲಿ ವಾಹನಗಳನ್ನು ತಪಾಸಣೆ ಮಾಡಲಾಗುವುದು. ಜಿಲ್ಲೆಯ ಎಲ್ಲಾ ಪೆÇಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲಾಗುವುದು.
ಈ ಹಿಂದೆ ಸಮುದ್ರದಡಿಯ ಮೂಲಕ ಭಾರತಕ್ಕೆ ದಾಳಿ ನಡೆಸಲು ಪಾಕ್ ಉಗ್ರರ ಸಂಘಟನೆಯಾದ ಜೈಶ್ ಇ ಮುಹಮ್ಮದ್ ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ ಎಂಬ ಬಗ್ಗೆ ವರದಿ ಇದೆ ಎಂದು ನೌಕಾದಳ ವರಿಷ್ಠ ಅಡ್ಮಿರಲ್ ಕರಂಬೀರ್ ಸಿಂಗ್ ಕಳೆದ ತಿಂಗಳು ಮುನ್ನೆಚ್ಚರಿಕೆ ನೀಡಿದ್ದರು. ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಬಳಿಕ ದಾಳಿ ರೀತಿಯಲ್ಲಿ ಬದಲಾವಣೆ ಮಾಡಲು ಉಗ್ರರು ಸಿದ್ಧರಾಗುತ್ತಿದ್ದಾರೆಂದು ಇಂಟೆಲಿಜೆನ್ಸ್‍ಗೆ ವರದಿ ಲಭಿಸಿದೆ ಎಂದು ನೌಕಾ ದಳದ ವರಿಷ್ಠರು ತಿಳಿಸಿದ್ದರು.
ಸಮುದ್ರ ಮಾರ್ಗವಾಗಿ ಯಾವುದೇ ದಾಳಿಯನ್ನು ಎದುರಿಸಲು ನೌಕಾ ಪಡೆ ಸಜ್ಜಾಗಿದೆಯೆಂದು ಕರಂಬೀರ್ ಸಿಂಗ್ ತಿಳಿಸಿದ್ದಾರೆ. ಜೈಶ್ ಇ ಮುಹಮ್ಮದ್ ಉಗ್ರ ಸಂಘಟನೆಯ ಮುಳುಗು ತಜ್ಞರಾದ ಆತ್ಮಾಹುತಿ ದಳಕ್ಕೆ ಸೇರಿದ ಉಗ್ರರು ಸಮುದ್ರಡಿಯ ಮೂಲಕ ಹೇಗೆ ದಾಳಿ ನಡೆಸಬಹುದೆಂಬ ಬಗ್ಗೆ ತರಬೇತಿ ಪಡೆಯುತ್ತಿದ್ದಾರೆಂದು ಇಂಟೆಲಿಜನ್ಸ್‍ಗೆ ಮಾಹಿತಿ ಲಭಿಸಿತ್ತು.


