ಕಾಸರಗೋಡು: ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಕೇರಳದ ಎಲ್ಲಾ ಶಿಕ್ಷಣ ಜಿಲ್ಲೆಗಳಲ್ಲೂ ನಡೆಸುವ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಬೇತಿ ಯೋಜನೆ ಕಾಸರಗೋಡು ವಿದ್ಯಾಭ್ಯಾಸ ಜಿಲ್ಲೆಯಲ್ಲೂ ಆರಂಭಗೊಂಡಿತು.
ಒಂದು ವರ್ಷ ಕಾಲಾವಧಿಯ ಈ ಯೋಜನೆಯಲ್ಲಿ ತಜ್ಞರಿಂದ ತರಬೇತಿ ಲಭಿಸಲಿದೆ. ವಿಜ್ಞಾನ, ಗಣಿತ, ಕಲೆ, ಸಂಸ್ಕøತಿ, ಆರೋಗ್ಯ ಮೊದಲಾದ ಕ್ಷೇತ್ರಗಳಲ್ಲಿ ತರಗತಿ, ಶಿಬಿರಗಳು, ಶೈಕ್ಷಣಿಕ ಯಾತ್ರೆ ಆಯ್ಕೆಯಾದ ಮಕ್ಕಳಿಗೆ ಲಭಿಸಲಿದೆ.
ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಡಾ.ರಘುರಾಂ ಅಧ್ಯಕ್ಷತೆ ವಹಿಸಿದರು. ನಗರಸಭಾ ಸದಸ್ಯ ರಾಶಿದ್ ಪೂರ್ಣಂ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಶಿಕ್ಷಣಾಧಿಕಾರಿ ಎನ್.ನಂದಿಕೇಶನ್ ಉದ್ಘಾಟಿಸಿದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ, ಅಜ್ಮಲ್ ಮಾಸ್ತರ್, ಅನಿಲ್ ಕಾಡಗಂ ಮೊದಲಾದವರು ಶುಭಹಾರೈಸಿದರು. ನಿರ್ಮಲ್ ಕುಮಾರ್ ಕಾಡಗಂ ಮಕ್ಕಳಿಗೆ ಹಾಗು ಪೆÇೀಷಕರಿಗೆ ತರಗತಿ ನಡೆಸಿದರು. ಸಂಯೋಜಕ ಸಂತೋಷ್ ಕುಮಾರ್ ಸ್ವಾಗತಿಸಿ, ಕೃಷ್ಣವೇಣಿ ವಂದಿಸಿದರು.


