ಬದಿಯಡ್ಕ: ಕಾಲುವಾರ್ಷಿಕ ಪರೀಕ್ಷೆಯ ಕೊನೆಯ ದಿನವಾದ ಶುಕ್ರವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಓಣಂ ಸಂಭ್ರಮಾಚರಣೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು. ಪರೀಕ್ಷೆಯ ಗುಂಗಿನಿಂದ ಹೊರಬಂದ ವಿದ್ಯಾರ್ಥಿಗಳು ತಮ್ಮ ತರಗತಿಗಳಲ್ಲಿ ಹೂವಿನ ರಂಗೋಲಿಯನ್ನು ರಚಿಸಿದರು. ಪ್ರಾಕೃತಿಕವಾಗಿ ಲಭಿಸುವಂತಹ ಹೂವು ಹಾಗೂ ಎಲೆಗಳನ್ನು ಸಂಗ್ರಹಿಸಿ ತಯಾರಿಸಿದ ಹೂವಿನ ರಂಗೋಲಿ (ಪೂಕಳಂ) ಆಕರ್ಷಕವಾಗಿತ್ತು. ಶಾಲಾ ಅಧ್ಯಾಪಕ ವೃಂದವು ಸಂಪೂರ್ಣ ಸಹಕಾರವನ್ನು ನೀಡಿದರು. ಮಧ್ಯಾಹ್ನ ಓಣಂ ವಿಶೇಷ ಭೋಜನ ಕೂಟದಲ್ಲಿ ವಿದ್ಯಾರ್ಥಿಗಳಲ್ಲಿ ಪಾಲ್ಗೊಂಡು ಪಾಯಸದ ಸವಿಯುಂಡರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಓಣಂ ಸಂಭ್ರಮ
0
ಸೆಪ್ಟೆಂಬರ್ 07, 2019