HEALTH TIPS

ಕೇರಳ ಹೃದಯದಲ್ಲಿ ಅನುರಣಿಸಿದ ಗಡಿನಾಡ ಕನ್ನಡ ಕಂಪು- ಕನ್ನಡ ಸಂಘ ಕೊಚ್ಚಿಯ ಸಂಯೋಜನೆಯಲ್ಲಿ ಯಶಸ್ವಿಯಾದ ಸವಿಹೃದಯದ ಕವಿಮಿತ್ರರ ಸಾಹಿತ್ಯ ಸಾಂಸ್ಕøತಿಕ ವೈವಿಧ್ಯ


          ಕಾಸರಗೋಡು: ಎರ್ನಾಕುಳಂನ ಕನ್ನಡ ಸಂಘ ಕೊಚ್ಚಿಯ ನೇತೃತ್ವದಲ್ಲಿ ಎರ್ನಾಕುಳಂ ನ ಎಲ್ಡರ್ಸ್ ಫೋರಂ ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಆಯೋಜಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಗುರುವಾರ ಸಂಜೆ ಸವಿಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ, ಕಾಸರಗೋಡು ತಂಡವು ವೈವಿಧ್ಯಮಯ ಸಾಹಿತ್ಯ-ಸಾಂಸ್ಕøತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿತು.
         ಕಾರ್ಯಕ್ರಮದ ಆರಂಭದಲ್ಲಿ ಸವಿಹೃದಯದ ಕವಿ ಮಿತ್ರರು ವೇದಿಕೆಯ ವಿದುಷಿಃ ಅನುಷಾ ಚೇಕೋಡ್ ಹಾಗೂ ವಿದುಷಿಃ ಅಕ್ಷತಾ ಕೆ ಅವರಿಂದ ಶ್ರೀಕೃಷ್ಣ ಲೀಲಾಮೃತದ ಸ್ವಾಗತ ನೃತ್ಯ ಪ್ರದರ್ಶನ ನಡೆಯಿತು. ಬಳಿಕ ವೇದಿಕೆಯ ಸಲಹೆಗಾರ, ಕವಿ, ಪತ್ರಕರ್ತ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರು ಸನಾತನ ಪರಂಪರೆಯ ಹಬ್ಬಗಳು ಮತ್ತು ಸಾಂಸ್ಕøತಿಕ-ಸಾಮಾಜಿಕ ಏಕತೆಯ ಬಗ್ಗೆ ಉಪನ್ಯಾಸ ನೀಡಿದರು. ಅವರು ಈ ಸಂದರ್ಭ ಮಾತನಾಡಿ, ವಿಶಾಲವಾದ ಭಾರತೀಯ ಆಚಾರ ಅನುಷ್ಠಾನಗಳು ಸಮಷ್ಠಿಯಲ್ಲಿ ಸಾಮಾಜಿಕ ಸುದೃಢ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು. ಗಣೇಶ ಚತುರ್ಥಿಯ ಆಚರಣೆಯು ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಆ ಬಳಿಕ ದೇಶದ ಜನತಂತ್ರ ರೂಪಣೆಯಲ್ಲಿ ತನ್ನದೇ ಮಹತ್ವ ಪಡೆದಿದೆ. ಸಾಮಾಜದ ಜನರ ಮಧ್ಯೆ ಜಾತಿ, ಮತ, ಬಡವ, ಶ್ರೀಮಂತನೆಂಬ ಬೇಧಗಳಿಲ್ಲದೆ ಹೃದಯ ಬೆಸೆಯುವಿಕೆಯಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು. ಶ್ರೀಮಂತ ಪರಂಪರೆಯ ಕನ್ನಡಿಗರು ಕೇರಳದ ಹೃದಯ ಭಾಗದಲ್ಲಿ ದಶಕಗಳಿಂದ ಕಟ್ಟಿಬೆಳೆಸಿದ ಕನ್ನಡ ಸಂಘಟನೆ ತನ್ನ ವಿವಿಧ ಚಟುವಟಿಕೆಗಳ ಮೂಲಕ ಸ್ತುತ್ಯರ್ಹವಾಗಿ ಇತರೆರಡೆಗಳಿಗೆ ಮಾದರಿಯಾಗಿದೆ. ಕನ್ನಡದ ಮನಸ್ಸು ಎಲ್ಲಿದ್ದರೂ ತನ್ನ ಪರಂಪರೆಯನ್ನು ವರ್ತಮಾನದಲ್ಲಿ ತುಡಿಯುತ್ತಿರುವುದು ಭಾಷಾಭಿಮಾನ, ಹೃದಯ ವೈಶಾಲ್ಯತೆಯ ಪ್ರತೀಕ ಎಂದು ತಿಳಿಸಿದರು.
       ಕಾರ್ಯಕ್ರಮದ ಸಂಯೋಜಕಿ, ಕೊಚ್ಚಿ ಕನ್ನಡ ಸಂಘದ ಸದಸ್ಯೆ, ಕವಯಿತ್ರಿ, ಶಿಕ್ಷಕಿ ಪರಿಣಿತ ರವಿ ಎಡನಾಡು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ನೆಲದಿಂದ ದೂರವಿದ್ದರೂ ಭಾಷೆ, ಸಂಸ್ಕøತಿಯ ಅಂತರಾಳದ ನಿತ್ಯ ತುಡಿತ ಇಂತಹ ಕಾರ್ಯಕ್ರಮವನ್ನು ಆಯೋಜಿಸಲು ಕಾರಣವಾಯಿತು. ಕೊಚ್ಚಿಯ ಕನ್ನಡ ಸಂಘದ ಸಂಪೂರ್ಣ ಸಹಕಾರವು ಗಡಿನಾಡು ಕಾಸರಗೋಡಿನ ಕವಿ-ಕಲಾವಿದರ ಬಹುಮುಖ ವ್ಯಕ್ತಿತ್ವ, ಕನ್ನಡದ ಅಂತಃಸತ್ವದ ಪ್ರೇರಣದಾಯಿ ವಿಶಾಲತೆಯ ಹರಡುವಿಕೆಗೆ ವೇದಿಕೆ ಒದಗಿಸಿರುವುದು ಐತಿಹಾಸಿಕ ದಾಖಲೆ ಎಂದು ತಿಳಿಸಿದರು. ಸ್ವತಃ ರಚಿಸಿ ಸಂಯೋಜಿಸಿರುವ ಗೋಕರ್ಣ ಮಹಾತ್ಮೆ ಕಥಾ ರೂಪಕವನ್ನು ನವೀನ ಶೈಲಿಯಲ್ಲಿ ಪ್ರಸ್ತುತಪಡಿಸಿದರು.
    ಸವಿಹೃದಯದ ಕವಿಮಿತ್ರರು ವೇದಿಕೆಯ ಸಂಚಾಲಕ ಸುಭಾಶ್ ಪೆರ್ಲ ಅವರು ನಿರ್ದೇಶಿಸಿದ ಆನಂದ ಸೂರ್ಡೇಲು ಅವರು ರಚಿಸಿದ ಸತ್ಕರ್ಮದ ಬದುಕು ಕಿರು ನಾಟಕ ಈ ಸಂದರ್ಭ ಪ್ರಸ್ತುತಗೊಂಡಿತು. ಸುಭಾಶ್ ಪೆರ್ಲ, ಆನಂದ ಸೂರ್ಡೇಲು, ರಿತೇಶ್ ಕಿರಣ್ ಕಾಟುಕುಕ್ಕೆ, ಅಭಿಲಾಷ್ ಪೆರ್ಲ, ಪೃಥ್ವಿ ಶೆಟ್ಟಿ ಕಾಟುಕುಕ್ಕೆ ಪಾತ್ರಗಳನ್ನು ನಿರ್ವಹಿಸಿದರು. ವಿದುಷಿಃ ಅನುಷಾ ಚೇಕೋಡ್ ಮತ್ತು ವಿದುಷಿಃ ಅಕ್ಷತಾ ಕೆ ಅವರು ಮಧುರಕಾನನ ಗಣಪತಿ ಭಟ್ ರಚಿಸಿರುವ ಗಾನಮಧುರಂ ಕೃತಿಯಾಧಾರಿತ ಪಾಣಿನೀ ದೇರಾಜೆ ಅವರು ರಾಗ ಸಂಯೋಜಿಸಿ, ಶ್ರೀದೇವಿ ಕಲ್ಲಡ್ಕ ಅವರ ಹಾಡುಗಾರಿಕೆಯ ವಿಶಿಷ್ಟ ನೃತ್ಯ ರೂಪಕವನ್ನು ಪ್ರಸ್ತುತಪಡಿಸಿದರು. ಡ್ರಾಮಾ ಜ್ಯೂನಿಯರ್ಸ್ ಬಹುಮಾನಿತ ಪ್ರತಿಭೆ ಅನೂಪ್ ರಮಣ ಶರ್ಮ ಮುಳ್ಳೇರಿಯ ವಿವಿಧ ಅಭಿನಯಗಳ ಮೂಲಕ ಗಮನ ಸೆಳೆದನು.ಕವಿಗಳಾದ ಮಧುರಕಾನ ಗಣಪತಿ ಭಟ್, ಪ್ರಮೀಳಾ ಚುಳ್ಳಿಕ್ಕಾನ, ಚೇತನಾ ಕುಂಬಳೆ, ರಿತೇಶ್ ಕಿರಣ್ ಕಾಟುಕುಕ್ಕೆ, ಶ್ವೇತಾ ಕಜೆ, ನಿರ್ಮಲಾ ಸೇಸಪ್ಪ ಖಂಡಿಗೆ, ಮಧುರಕಾನ ಗಣಪತಿ ಭಟ್ ಸ್ವರಚಿತ ಕವನ, ಗಜಲ್ ಗಳನ್ನು ಪ್ರಸ್ತುತಪಡಿಸಿದರು.ಪೃಥ್ವಿ ಶೆಟ್ಟಿ ಕಾಟುಕುಕ್ಕೆ ಗದಾಯುದ್ದ ಏಕಪಾತ್ರಾಭಿನಯ ಪ್ರಸ್ತುತಪಡಿಸಿದನು. ಗಾಯಕ ವಸಂತ ಬಾರಡ್ಕ ಅವರು ವಿವಿಧ ಭಾವಗೀತೆ, ಭಕ್ತಿಗೀತೆ ಹಾಗೂ ಜಾನಪದ ಗೀತೆಗಳನ್ನು ಹಾಡಿದರು. ಶಶಿಧರ ಎದುರ್ತೋಡು ರಚಿಸಿರುವ, ಪುರುಷೋತ್ತಮ ಭಟ್ ಅವರ ಕಥಾ ಸಂಯೋಜನೆ, ನಿರ್ದೇಶನ ನೀಡಿ ಅಭಿನಯಿಸಿದ ಧರ್ಮ ಸಂಘರ್ಷ ನಾಟಕ ಪ್ರದರ್ಶನ ನಡೆಯಿತು.ಅಕ್ಷತಾ ಪಿ. ಭಟ್ ಪುದುಕೋಳಿ ಹಾಗೂ ಅನೂಪ್ ರಮಣ ಶರ್ಮ ಪಾತ್ರ ನಿರ್ವಹಣೆ ಮಾಡಿದರು. ಪುಟಾಣಿ ಪೃಥ್ವಿನ್ ಕೃಷ್ಣ ಪುದುಕೋಳಿ ಅವನಿಂದ ಸಿನಿ ನೃತ್ಯ ಪ್ರಸ್ತುತಿಯೊಂದಿಗೆ  ಸಾಹಿತ್ಯ-ಸಾಂಸ್ಕøತಿಕ ಸಂಜೆ ಸಂಪನ್ನಗೊಂಡಿತು.
        ಕೊಚ್ಚಿ ಕನ್ನಡ ಸಂಘದ ಅಧ್ಯಕ್ಷ ಶ್ರೀಕಾಂತ ಅನವಟ್ಟಿ, ಉಪಾಧ್ಯಕ್ಷ ವಿನಾಯಕ್ ಪ್ರಭು, ಕಾರ್ಯದರ್ಶಿ ಫಣಿ ಶೇಖರ್, ಜೊತೆ ಕಾರ್ಯದರ್ಶಿ ಹರೀಶ್, ಖಜಾಂಜಿ ಶ್ರೀನಿವಾಸ ರಾವ್, ಕಾರ್ಯಕಾರಿ ಸಮಿತಿ ಸದಸ್ಯರಾದ ರವಿಶಂಕರ ಸಿ.ಎನ್., ಗಂಗಾಧರ್, ಸುಭಾಶ್ ಗೌಡ, ನಾಗರಾಜ್ ಎನ್.ವಿ., ಗಿರೀಶ್ ಫಡ್ಕೆ, ತ್ಯಾಗರಾಜ್, ಸಲಹಾ ಸಮಿತಿ ಸದಸ್ಯರುಗಳಾದ ಶಿವಂತ್ ಕೌಡಿ, ಸೂರ್ಯನಾರಾಯಣ ಕೆ.ಎನ್., ಈಶ್ವರ ಬಿ.ಎಂ., ಶ್ರೀನಿವಾಸ್ ಗೋಪಾಲ್, ರಾಮಚಂದ್ರನ್, ಡಾ.ಪ್ರಭಾಕರ್, ವಿಜಯಕುಮಾರ್ ತಂತ್ರಿ, ಮಹೇಶ್ ಭಟ್, ಮೋಹನ್, ಕಿರಣ್, ವೆಂಕಟೇಶ್ ಬಾಬು, ವಿದ್ಯಾ ರವಿಶಂಕರ್, ಚಾರುಲತಾ ಕೌಡಿ, ವರದರಾಜ ಜೋಶಿ, ಡಾ.ಗಿರೀಶ್, ಡಾ.ಮಲ್ಲಿಕಾರ್ಜುನ, ಜಗನ್ನಾಥ್, ರವೀಂದ್ರನಾಥ ಎಡನಾಡು,ಪದ್ಮಾವತಿ ಎಂ.ಭಟ್ ಮುಳ್ಳೇರಿಯ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries