ಮಧೂರು: ಮಧೂರು ಗ್ರಾಮ ಪಂಚಾಯತಿ ಕಚೇರಿಯಲ್ಲಿ ಓಣಂ ಹಬ್ಬವನ್ನು ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್ ಉದ್ಘಾಟಿಸಿದರು. ಓಣಂ ಆಚರಣೆಯ ಅಂಗವಾಗಿ ಆಟೋಟ ಸ್ಪರ್ಧೆಗಳು ಮತ್ತು ಪೂಕಳಂ(ಹೂವಿನ ರಂಗೋಲಿ) ಸ್ಪರ್ಧೆಗಳು ನಡೆಯಿತು. ಮಧ್ಯಾಹ್ನ ಓಣಂ ಸದ್ಯ (ಭೂರೀ ಭೋಜನ) ನಡೆಯಿತು.