ಕುಂಬಳೆ: ಯುವಮೋರ್ಚಾ ಕುಂಬಳೆ ಪಂಚಾಯತಿ ನೂತನ ಸಮಿತಿ ರಚನಾ ಸಭೆ ಇತ್ತೀಚೆಗೆ ಕುಂಬಳೆಯ ಪೈ ಹಾಲ್ ನಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಯುವಮೋರ್ಚಾ ಮಂಡಲ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ವಹಿಸಿದ್ದರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ವಿಜಯ ಕುಮಾರ್ ರೈ ಸಭೆಯನ್ನು ಉದ್ಘಾಟಿಸಿದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮುರಳಿಧರ ಯಾದವ್, ಜಿಲ್ಲಾ ಸಮಿತಿ ಸದಸ್ಯ ರಮೇಶ್ ಭಟ್, ಕುಂಬಳೆ ಪಂಚಾಯತಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧಾಕರ್ ಕಾಮತ್, ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ರಾಜೇಶ್ ಕೈಂದರ್, ಪ್ರಧಾನ ಕಾರ್ಯದರ್ಶಿ ದಿಲೀಪ್, ಗ್ರಾಮ ಪಂಚಾಯತಿ ಸದಸ್ಯ ಸುಜಿತ್ ಉಪಸ್ಥಿತರಿದ್ದರು.
ನೂತನ ಸಮಿತಿಯನ್ನು ಬಿಜೆಪಿ ಮಂಡಲ ಕಾರ್ಯದರ್ಶಿ, ಕುಂಬಳೆ ಪಂಚಾಯತಿ ಪ್ರಭಾರಿ ಮಣಿಕಂಠ ರೈ ಪಟ್ಲ ಘೋಷಿಸಿದರು. ಅಧ್ಯಕ್ಷರಾಗಿ ಪ್ರದೀಪ್ ಬಂಬ್ರಾಣ, ಪ್ರಧಾನ ಕಾರ್ಯದರ್ಶಿಯಾಗಿ ಲಿಖಿತ್ ಆಳ್ವ ಬಂಬ್ರಾಣ ಅವರನ್ನು ಆಯ್ಕೆಮಾಡಲಾಯಿತು. ಶರತ್ ಕಿದೂರು ಸ್ವಾಗತಿಸಿ, ಲಿಖಿತ್ ಆಳ್ವ ಬಂಬ್ರಾಣ ವಂದಿಸಿದರು.


