ಮುಳ್ಳೇರಿಯ: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಎಕೆಪಿಎ) ಕಾಸರಗೋಡು ವಲಯ ಸಮಿತಿಯ ನೇತೃತ್ವದಲ್ಲಿ ಬೋವಿಕ್ಕಾನ ಸೌಪರ್ಣಿಕ ಸಭಾಂಗಣದಲ್ಲಿ ನಡೆದ ಕುಟುಂಬ ಸಂಗಮದಲ್ಲಿ ಪ್ರಳಯ ಬಾಧಿತರ ಪುನರ್ವಸತಿಗಾಗಿ ತನ್ನ ಭೂಮಿಯನ್ನೇ ದಾನಗೈದ ಪ್ರಿಯಾ ರವೀಂದ್ರನ್ ಅವರನ್ನು ಅಭಿನಂದಿಸಲಾಯಿತು. ಎಕೆಪಿಎ ಜಿಲ್ಲಾ ಅಧ್ಯಕ್ಷ ಹರೀಶ್ ಪಾಲಕ್ಕುನ್ನು ಶಾಲು ಹೊದೆಸಿ, ಸ್ಮರಣಿಕೆಯನ್ನು ನೀಡಿದರು. ರಾಜ್ಯ ಸಮಿತಿ ಸದಸ್ಯ ಎನ್.ಎ.ಭರತನ್, ಜಿಲ್ಲಾ ಕಾರ್ಯದರ್ಶಿ ಶ್ರೀಜಿತ್ ನಿಲಾಯಿ, ಕೋಶಾಧಿಕಾರಿ ಮನೋಹರನ್, ವಲಯ ಅಧ್ಯಕ್ಷ ಗೋವಿಂದನ್ ಚೆಂಗರಂಗಾಡು, ಕುಟುಂಬ ಸಂಗಮ ಸಂಚಾಲಕ ಸುನಿಲ್ ಕುಮಾರ್, ಕೋಶಾಧಿಕಾರಿ ಚಂದ್ರಶೇಖರ ಉಪಸ್ಥಿತರಿದ್ದರು.


